ಚೆನ್ನೈಯಿನ್‌ಗೆ ಡೆಲ್ಲಿ ನೈನಾಮೋಸ್‌ ಸವಾಲು

7

ಚೆನ್ನೈಯಿನ್‌ಗೆ ಡೆಲ್ಲಿ ನೈನಾಮೋಸ್‌ ಸವಾಲು

Published:
Updated:

ಚೆನ್ನೈ: ಸತತ ಆರು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಡೈನಾಮೋಸ್ ತಂಡ ಇಂಡಿಯನ್ ಸೂಪರ್ ಲೀಗ್‌ ಟೂರ್ನಿಯಲ್ಲಿ ಭಾನುವಾರದ ಪಂದ್ಯದಲ್ಲಿ ಚೆನ್ನೈಯಿನ್ ಫುಟ್‌ಬಾಲ್ ಕ್ಲಬ್ ವಿರುದ್ಧ ಸೆಣಸಲಿದೆ.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು   ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿ ಯನ್ನು ಆತಿಥೇಯರು ಇಟ್ಟಿದ್ದಾರೆ.

ಎಫ್‌ಸಿ ಪುಣೆ ಸಿಟಿ ವಿರುದ್ಧ ಜಯ ಗಳಿಸಿ ಶುಭಾರಂಭ ಮಾಡಿದ್ದ ಡೆಲ್ಲಿ ಡೈನಾಮೋಸ್ ನಂತರ ನಿರೀಕ್ಷಿತ ಸಾಮರ್ಥ್ಯ ತೋರುವಲ್ಲಿ ವಿಫಲವಾಗಿತ್ತು. ಭಾನುವಾರದ ಪಂದ್ಯದಲ್ಲಿ ಸ್ಟ್ರೈಕರ್ ಕಲು ಊಚೆ ಆಡದೇ ಇರುವುದು ಮತ್ತು ಮಿಡ್‌ಫೀಲ್ಡರ್ ಕ್ಲಾಡಿಯೊ ಮಥಾಯಿಸ್ ಅಮಾನತುಗೊಂಡಿರುವುದು ತಂಡದ ಸಂಕಷ್ಟ ಹೆಚ್ಚಿಸಿದೆ.

‘ಊಚೆ ಆಡಲು ಫಿಟ್ ಆಗಿಲ್ಲ. ಅವರಿಗೆ ಈಗ ವಿಶ್ರಾಂತಿ ಅಗತ್ಯವಿದೆ’ ಎಂದು ಕೋಚ್ ಮಿಗೆಲ್ ಪೋರ್ಚುಗಲ್ ಹೇಳಿದರು. ಮುಂಬೈ ಸಿಟಿ ಎಫ್‌ಸಿ ಮಿಡ್‌ಫೀಲ್ಡರ್ ಸ್ನೇಹರಾಜ್ ಸಿಂಗ್ ಅವರೊಂದಿಗೆ ಜಗಳವಾಡಿದ ಕಾರಣ ಕ್ಲಾಡಿಯೊ ನಾಲ್ಕು ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry