ಲಗೋರಿ: ಕರ್ನಾಟಕಕ್ಕೆ ಮುನ್ನಡೆ

7

ಲಗೋರಿ: ಕರ್ನಾಟಕಕ್ಕೆ ಮುನ್ನಡೆ

Published:
Updated:
ಲಗೋರಿ: ಕರ್ನಾಟಕಕ್ಕೆ ಮುನ್ನಡೆ

ಮಂಗಳೂರು: ಕರ್ನಾಟಕ ಪುರುಷರ ತಂಡವು  ಅಮೆಚೂರ್ ಲಗೋರಿ ಫೆಡರೇಶನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಲಗೋರಿ ಅಸೋಶಿಯೇಶನ್ ಮತ್ತು ಪಾಥ್‌ವೇ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಕರಾವಳಿ  ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ 7 ನೇ ಸಿನಿಯರ್ ಲಗೋರಿ ಚಾಂಪಿಯನ್‌ ಷಿಪ್‌ನಲ್ಲಿ ಶುಭಾರಂಭ ಮಾಡಿದೆ.

ಶನಿವಾರ ಆರಂಭವಾದ ಟೂರ್ನಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಕರ್ನಾಟಕ ನಾಲ್ಕರಲ್ಲಿ ಗೆದ್ದಿತು. ಆರಂಭಿಕ ಪಂದ್ಯದಲ್ಲಿ ಚತ್ತಿಸಗಡ ತಂಡದ ವಿರುದ್ಧ ಕರ್ನಾಟಕ ಪುರುಷರ ತಂಡ ಗೆದ್ದಿತು. 5ನೇ ಪಂದ್ಯದಲ್ಲಿ ಹರಿಯಾಣ ತಂಡದ ವಿರುದ್ದ ಸೋಲು ಕಂಡಿತು.

ಇದೇ ಹಂತದ ಟೂರ್ನಿಯಲ್ಲಿ ರಾಜ್ಯದ ಮಹಿಳೆಯರ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಗೆದ್ದಿದೆ. ತೆಲಂಗಾಣ, ಹರಿಯಾಣ, ಪುದುಚೇರಿ ತಂಡಗಳ ವಿರುದ್ಧ  ಗೆದ್ದರು. ಛತ್ತೀಸ್‌ಗಡ, ಮಹಾರಾಷ್ಟ್ರ, ತೆಲಂಗಾಣ, ಪುದುಚೇರಿ ವಿರುದ್ದ ಕರ್ನಾಟಕ ಪುರುಷರ ತಂಡವು ಜಯಿಸಿತು.

ದೆಹಲಿ ತಂಡದ ವಿರುದ್ಧ ತೆಲಂಗಾಣ, ಹರಿಯಾಣ ವಿರುದ್ಧ ಮಹಾರಾಷ್ಟ್ರ,  ಮಧ್ಯ ಪ್ರದೇಶ ವಿರುದ್ಧ ಆಂಧ್ರಪ್ರದೇಶ, ಚತ್ತಿಸಗಡ ವಿರುದ್ಧ ದಾದರ್ ಹವೆಲಿ, ಕರ್ನಾಟಕ ವಿರುದ್ದ ಹರಿಯಾಣ,  ದೆಹಲಿ ವಿರುದ್ಧ ದಾದರ್ ಹವೆಲಿ, ಆಂದ್ರ ಪ್ರದೇಶ ವಿರುದ್ಧ ತಮಿಳುನಾಡು, ಮಧ್ಯ ಪ್ರದೇಶ ವಿರುದ್ಧ ವಿದರ್ಭ, ವಿದರ್ಭ ವಿರುದ್ಧ ಪುದುಚೇರಿ. ಮಧ್ಯ ಪ್ರದೇಶ ವಿರುದ್ಧ ಆಂಧ್ರ ಪ್ರದೇಶ  ತಂಡವು ಗೆಲುವು ದಾಖಲಿಸಿದೆ.

ಭಾನುವಾರ ಸೆಮಿಫೈನಲ್‌ ಹಾಗೂ ಫೈನಲ್‌ ಹಂತ ಟೂರ್ನಿಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry