ಗುರುವಾರ , ಜೂಲೈ 9, 2020
26 °C

ಸಿಮೊನಾ ಹಲೆಪ್‌ಗೆ ಪ್ರಶಸ್ತಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಿಮೊನಾ ಹಲೆಪ್‌ಗೆ ಪ್ರಶಸ್ತಿ

ಶೆಂಜೆನ್‌: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್‌ ಶೆಂಜೆನ್‌ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಶನಿವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರುಮೇನಿಯಾ ಆಟಗಾರ್ತಿ ಹಲೆಪ್‌ 6–1, 2–6, 6–0ಯಲ್ಲಿ ಜೆಕ್ ಗಣರಾಜ್ಯದ ಕಟೆರಿನಾ ಸಿನಿಕೋವಾ ಅವರನ್ನು ಮಣಿಸಿದರು. 72 ನಿಮಿಷದ ಪೈಪೋಟಿಯಲ್ಲಿ ಸಿಮೊನಾ ಮೇಲುಗೈ ಸಾಧಿಸಿದರು.

ಮೊದಲ ಸೆಟ್‌ ಸುಲಭದಲ್ಲಿ ಗೆದ್ದ ಅವರು ಎರಡನೇ ಸೆಟ್‌ನಲ್ಲಿ ಆರಂಭದಲ್ಲಿಯೇ ಹಿನ್ನಡೆ ಅನುಭವಿಸುವ ಮೂಲಕ ಸೋತರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ಎದುರಾಳಿಗೆ ಒಂದೂ ಗೇಮ್ ಬಿಟ್ಟುಕೊಡಲಿಲ್ಲ.

26 ವರ್ಷದ ಆಟಗಾರ್ತಿ ಮೆಲ್ಬರ್ನ್‌ನಲ್ಲಿ ಜನವರಿ 15ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡು ಆಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.