ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’

Last Updated 6 ಜನವರಿ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡ ಬಳ್ಳಾಪುರದ ಕಾಡನೂರು ಗ್ರಾಮದಿಂದ ಟ್ರ್ಯಾಕ್ಟರ್‌ ಮೂಲಕ ರಾಗಿ ತೆನೆ ತರುವಾಗ ಹುಲ್ಲಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಟ್ರ್ಯಾಕ್ಟರ್‌ ಹೊತ್ತಿ ಉರಿದ ಘಟನೆ ಹೆಸರಘಟ್ಟ ಗ್ರಾಮದ ಕೆರೆ ರಸ್ತೆಯಲ್ಲಿ ನಡೆದಿದೆ.

ಹುಲ್ಲಿಗೆ ಹತ್ತಿದ ಬೆಂಕಿ ಬಹುಬೇಗನೆ ಇಡೀ ಟ್ರ್ಯಾಕ್ಟರನ್ನು ಅವರಿಸಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.

ಟ್ರ್ಯಾಕ್ಟರ್‌ಗೆ ಬೆಂಕಿ ಹತ್ತಿದ ಹತ್ತು ನಿಮಿಷಕ್ಕೆ ಪೀಣ್ಯ ವಿಭಾಗದಿಂದ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು.

ಟ್ರ್ಯಾಕ್ಟರ್‌ನ ನಾಲ್ಕು ಟೈರ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.

‘ಒಂದೂವರೆ ಎಕರೆ ಜಮೀನಿನಲ್ಲಿ ರಾಗಿಯನ್ನು ಬೆಳೆದಿದ್ದೆ. ಈ ವರ್ಷ ಉತ್ತಮ ಮಳೆಯಾಗಿ ಒಳ್ಳೆಯ ಇಳುವರಿ ಬಂದಿತ್ತು. ರಾಗಿಯನ್ನು ಕಟಾವು ಮಾಡಿ ಕಣ ಮಾಡಲು ಹೆಸರಘಟ್ಟ ಸಮೀಪ ಇರುವ ಮುದ್ದಿನಪಾಳ್ಯಕ್ಕೆ ತರುತ್ತಿದ್ದೆ. ಸುಮಾರು ₹60,000 ಮೌಲ್ಯದ ರಾಗಿ ತೆನೆ ಬೆಂಕಿಗೆ ಆಹುತಿಯಾಗಿದೆ. ರಾಗಿ ಬೆಳೆ ಚೆನ್ನಾಗಿ ಬಂತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ರೈತ ನಾಗರಾಜು ಬೇಸರ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT