ಬುಧವಾರ, ಜೂಲೈ 8, 2020
21 °C

ಯುವ ಬಂಟರ ರಾಷ್ಟ್ರೀಯ ಸಮಾವೇಶ 13ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ ಬೆಂಗಳೂರಿನ ಬಂಟರ ಸಂಘದ ಯುವ ವಿಭಾಗವು ಇದೇ 13 ಮತ್ತು 14ರಂದು ‘ಯುವೈಕ್ಯ – ಯುವ ಬಂಟರ ರಾಷ್ಟ್ರೀಯ  ಸಮಾವೇಶವನ್ನು ಸಂಘದ ಆವರಣದಲ್ಲಿ  ಹಮ್ಮಿಕೊಂಡಿದೆ’ ಎಂದು ಯುವ ವಿಭಾಗದ ಮುಖ್ಯಸ್ಥ ಪ್ರೇಮ್‌ ಪ್ರಸಾದ್‌ ಶೆಟ್ಟಿ ತಿಳಿಸಿದರು.

ಶನಿವಾರ ಇಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮಾವೇಶದಲ್ಲಿ ವಿವಿಧ ಕಂಪೆನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ ಸಮುದಾಯದವರ ಸಭೆ ನಡೆಯಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯಮಿಗಳು ಸಂವಾದ, ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಾನ್ವಿತ ಯುವಕ–ಯುವತಿಯರಿಗೆ ‘ಯುವೈಕ್ಯ ಪುರಸ್ಕಾರ’ ನೀಡಲಾಗುವುದು’ ಎಂದರು.

ಮಾಹಿತಿಗೆ: 9845523324.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.