ಐಲೀಗ್‌: ಗೆಲುವಿನ ಹಾದಿಗೆ ಮರಳಿದ ಬಾಗನ್‌

7

ಐಲೀಗ್‌: ಗೆಲುವಿನ ಹಾದಿಗೆ ಮರಳಿದ ಬಾಗನ್‌

Published:
Updated:

ಕೋಲ್ಕತ್ತ : ಮೋಹನ್‌ ಬಾಗನ್‌ ತಂಡ ಭಾನುವಾರ ನಡೆದ ಐಲೀಗ್ ಪಂದ್ಯದಲ್ಲಿ 2–0 ಗೋಲುಗಳಿಂದ ಹಾಲಿ ಚಾಂಪಿಯನ್ ಐಜ್ವಾಲ್ ಎಫ್‌ಸಿ ಎದುರು ಜಯಗಳಿಸಿದೆ.

ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಮೋಹನ್ ಬಾಗನ್ ತಂಡ ಹೊಸ ಕೋಚ್‌ ಶಂಕರ್‌ಲಾಲ್‌ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಜಯದ ಹಾದಿಗೆ ಮರಳಿದೆ. ಈ ತಂಡದ ಮಸಿನ್ ಸಿಂಘಾನಿಯಾ (53ನೇ ನಿ.), ಅಸೆರ್‌ ದಿಪಿಂದಾ ಡಿಕಾ (75ನೇ ನಿ.) ತಲಾ ಒಂದು ಗೋಲು ತಂದುಕೊಟ್ಟರು.

ಬಾಗನ್‌ ತಂಡ ಡಿಸೆಂಬರ್‌ 10ರಂದು ನಡೆದ ಚರ್ಚಿಲ್‌ ಬ್ರದರ್ಸ್ ವಿರುದ್ಧದ ಪಂದ್ಯದಲ್ಲಿ 5–0 ಗೋಲುಗಳಲ್ಲಿ ಗೆದ್ದಿತ್ತು. ಆ ಬಳಿಕ ಮೂರು ಪಂದ್ಯದಲ್ಲಿ ಸೋಲು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು.

ಈ ಗೆಲುವಿನಿಂದ ಬಾಗನ್ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಆಡಿದ ಎಂಟು ಪಂದ್ಯಗಳಿಂದ 13 ಪಾಯಿಂಟ್ಸ್‌ಗಳನ್ನು ಕಲೆಹಾಕಿದೆ. ಐಜ್ವಾಲ್‌ ಆರು ಪಂದ್ಯಗಳ ಬಳಿಕ 10ನೇ ಸ್ಥಾನದಲ್ಲಿ ಉಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry