ಬುಧವಾರ, ಆಗಸ್ಟ್ 5, 2020
26 °C

ಕಾರು ರ‍್ಯಾಲಿ: ಅಂಗವಿಕಲರ ಚಾಕಚಕ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರು ರ‍್ಯಾಲಿ: ಅಂಗವಿಕಲರ ಚಾಕಚಕ್ಯತೆ

ಬೆಂಗಳೂರು: ಬ್ಲಿಸ್ ಆ್ಯಂಡ್ ಸ್ಮೈಲ್ ಸಂಸ್ಥೆ ಹಾಗೂ ಕೌಸ್ತುಭ ಪ್ರತಿಷ್ಠಾನದ ಸಹಯೋಗದಲ್ಲಿ ಅಂಗವಿಕಲರು ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಭಾನುವಾರ ಕಾರು ರ‍್ಯಾಲಿ ನಡೆಸಿದರು.

ಭೈರಸಂದ್ರ ಪಾಲಿಕೆ ಸದಸ್ಯಎನ್.ನಾಗರಾಜು ಹಾಗೂ ನಟಿ ಮಯೂರಿ ಅವರು ರ‍್ಯಾಲಿಗೆ ಚಾಲನೆ ನೀಡಿದರು. ಮೈದಾನದ ಬಳಿಯಿಂದ ಹೊರಟ ರ‍್ಯಾಲಿಯು ಜಯನಗರ 4ನೇ ಹಂತ, ಸೌತ್ ಎಂಡ್ ವೃತ್ತ, ಜೆ.ಪಿ.ನಗರದ ಮೂಲಕ ಸಾಗಿ ಅದೇ ಮಾರ್ಗದ ಮೂಲಕ ಮೈದಾನವನ್ನು ಸೇರಿತು.

ಅಂಧರು, ಅಂಗವಿಕಲರು ಬ್ರೈಲ್ ನಕ್ಷೆ ಬಳಸಿ, ಸಹಾಯಕರ ನೆರವಿನಿಂದ ಕಾರು ಚಲಾಯಿಸಿ ಚಾಕಚಕ್ಯತೆ ಮೆರೆದರು. ಅಂಗವಿಕಲರಿಗೆ ರಸ್ತೆಯಲ್ಲಿ ಸುರಕ್ಷತೆ ಕಲ್ಪಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.