ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರ: ಬನಶಂಕರಿ ವೈಭವದ ರಥೋತ್ಸವ

Last Updated 8 ಜನವರಿ 2018, 8:34 IST
ಅಕ್ಷರ ಗಾತ್ರ

ಕೆರೂರ: ದೇವಾಂಗ ಬಾಂಧವರ ಅಧಿದೇವತೆ ಇಲ್ಲಿನ ಬನಶಂಕರಿದೇವಿ ಜಾತ್ರಾ ಉತ್ಸವವು, ಶತಮಾನೋತ್ಸವ ದ ಸಾರ್ಥಕತೆಯೊಂದಿಗೆ ಭಾನುವಾರ ಮುಸ್ಸಂಜೆ ಗೋಧೂಳಿ ಮುಹೂರ್ತದಲ್ಲಿ 80ನೇ ವರ್ಷದ ಮಹಾ ರಥೋತ್ಸವವು ವೈಭವದಿಂದ ನೆರವೇರಿತು. ದೇಗುಲ ಇಕ್ಕೆಲಗಳಲ್ಲಿ ಕಿಕ್ಕಿರಿದು ಜಮಾಯಿಸಿದ್ದ ಸಹಸ್ರಾರು ಭಕ್ತಾದಿಗಳ ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.

‘ಬನದ ಶಾಖಾಂಬರಿ ನಿನ್ನ ಪಾದುಕೆ ಶಂಭೂಕೋ... ಬನಶಂಕರಿ ಶಂಭೂಕೋ....’ ಎಂದು ರಥೋತ್ಸವ ಕಾಲಕ್ಕೆ ಭಕ್ತರ ಹರುಷದ ಹೊನಲು ಮುಗಿಲು ಮುಟ್ಟಿತ್ತು.ಇದಕ್ಕೂ ಮುನ್ನ ದೇವಾಂಗಮಠದ ರುದ್ರಮುನಿ ಸ್ವಾಮೀಜಿ ದೇವಿ ರಥಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ದೇವಾಂಗ ಸಮಾಜದ ಮುಖಂಡರೊಂದಿಗೆ ನಾಡಿನ ಅಭ್ಯುದಯ, ಸಮೃದ್ಧಿಗೆ ಪ್ರಾರ್ಥಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹೊಸಪೇಟೆಯ ಬನಶಂಕರಿ ದೇಗುಲದಲ್ಲಿ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂಗಳ ಆಕರ್ಷಕ ಬೃಹತ್ ಮಾಲೆಗಳಿಂದ ಶೃಂಗರಿಸಲಾಗಿದ್ದ ಶತಮಾನದ ಆಕರ್ಷಕ ಮಂಟಪ ಹಾಗೂ ರಥವು ಭಕ್ತವೃಂದದ ಕಣ್ಮನ ಸೆಳೆದವು.

ಶ್ರದ್ಧೆ, ಭಕ್ತಿಯೊಂದಿಗೆ ಭಕ್ತ ಸಮೂಹ ಒಮ್ಮೆಲೆ ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ತೂರಿ ದೇವಿಯ ಅಡಿಯಲ್ಲಿ ತಮ್ಮ ಇಷ್ಟಾರ್ಥ ಸಮರ್ಪಿಸಿದರು. ನಂತರ ಸರಿಯಾದ ಸಮಯಕ್ಕೆ ರಥವು ತನ್ನ ಸ್ವಸ್ಥಾನಕ್ಕೆ ಮರಳುತ್ತಿದ್ದಂತೆ ಸಮಸ್ತ ಭಕ್ತರು ಚಪ್ಪಾಳೆ ತಟ್ಟಿ ಯಶಸ್ವಿ ಆಚರಣೆಯ ಖುಷಿಯಲ್ಲಿ ಸಂತಸ ಹೊಮ್ಮಿಸಿದ್ದು ಗಮನ ಸೆಳೆಯಿತು. ಉತ್ಸವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಶೃಂಗಾರ: ಜಾತ್ರೆ ಅಂಗವಾಗಿ ವಿಶೇಷ ಅಲಂಕಾರಗಳಿಂದ ಶೃಗಾರಗೊಂಡಿದ್ದ ಬನಶಂಕರಿ ದೇವಿಯು ಹೆಂಗಳೆ ಯರ ಕಣ್ಮನ ಸೆಳೆದಳು.ರಥೋತ್ಸವದ ನಂತರ ದೇಗುಲದಲ್ಲಿ ದೇವಿಯ ದರ್ಶನಕ್ಕೆ ಸಾಕಷ್ಟು ನೂಕು ನುಗ್ಗಲು ಕಂಡು ಬಂದಿತು.

ಸಿಹಿ ಹಂಚಿಕೆ: ರಥೋತ್ಸವದ ಬಳಿಕ ದೇವಿ ಪಾದಗಟ್ಟೆ ಪತ್ತಾರಕಟ್ಟೆ ಬಡಾವಣೆಯಲ್ಲಿ ಭಕ್ತ ಪರಿವಾರವು ಜಾತ್ರೆಗೆ ಬಂದ ಭಕ್ತಾದಿಗಳಿಗೆ ಕೇಸರಿ ಬಾತ್ ಸಿಹಿ ಹಂಚಿ ಜಾತ್ರೆಯ ಹರುಷದಲ್ಲಿ ಭಾಗಿಯಾದರು.ಜಾತ್ರೆಗಾಗಿ ಪಾದ ಗಟ್ಟೆಯನ್ನು ವಿವಿಧ ಬಣ್ಣ, ಹೂವುಗಳಿಂದ ಅಲಂಕರಿಸಲಾಗಿತ್ತು.

ಸ್ತ್ರೀಯರ ಜಾತ್ರೆ: ಜಾತ್ರೆಗೆಂದೇ ತವರಿಗೆ ಬಂದು ರಥೋತ್ಸವ ಸಡಗರದಲ್ಲಿ ಭಾಗವಹಿಸಿದ್ದ ಹೆಣ್ಣುಮಕ್ಕಳ ಸಂಭ್ರ ಮಕ್ಕೆ ಪಾರವೇ ಇರಲಿಲ್ಲ.ಸ್ಥಳೀಯರ ಮನೆಯಲ್ಲಿ ದೇವಿ ಜಾತ್ರೆಗೆಂದೇ ಅಪರಾಹ್ನ ತಯಾರಿಸಿದ್ದ ಖಾದ್ಯ ‘ಗೋಧಿ ಹುಗ್ಗಿ’ಯ ಭೂರಿ ಭೋಜನ ಜಾತ್ರೆಗೆ ಬಂದ ಬೀಗರು,ಮಿತ್ರ ಪರಿವಾರದ ಮನ ತಣಿಸಿ, ಜಾತ್ರೆ ಸಡಗರಕ್ಕೆ ಸಾಥ್‌ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT