ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಧಾರಿತ ವೇತನ ತಾರತಮ್ಯ ಖಂಡಿಸಿ ರಾಜೀನಾಮೆ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಬೀಜಿಂಗ್‌/ ಲಂಡನ್‌ (ಎಪಿ/ ಪಿಟಿಐ): ಬಿಬಿಸಿಯು ತನ್ನ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ನಡುವೆ ವೇತನ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ, ಚೀನಾದಲ್ಲಿನ ಸಂಸ್ಥೆಯ ಹಿರಿಯ ಸಂಪಾದಕಿ ಕ್ಯಾರಿ ಗ್ರೇಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೆ ‘ರಹಸ್ಯ ಹಾಗೂ ಅಕ್ರಮ ವೇತನ ಸಂಸ್ಕೃತಿ’ ಅನುಸರಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

‘ವೇತನ ಸಮಾನತೆಗಾಗಿ ಹಿರಿಯ ಅಧಿಕಾರಿಗಳ ಜತೆ ಹೋರಾಡುತ್ತಾ ಇರಲು ನನಗೆ ಸಾಧ್ಯವಿಲ್ಲ. ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಅತಿ ಹೆಚ್ಚು ವೇತನ ಪಡೆಯುತ್ತಿರುವವರಲ್ಲಿ ಮೂರನೇ ಒಂದು ಭಾಗದಷ್ಟು ಪುರುಷರು ಎಂಬುದು ಬಿಬಿಸಿಯ ಪ್ರಕಟಣೆಯಿಂದ ಈಚೆಗೆ ಬಹಿರಂಗಗೊಂಡಿದೆ. ಇದರಿಂದ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಅವರು ಬಿಬಿಸಿಯ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಈ ಆರೋಪವನ್ನು ಅಲ್ಲಗಳೆದಿರುವ ಬಿಬಿಸಿ, ‘ಮಹಿಳೆಯರ ವಿರುದ್ಧ ಯಾವುದೇ ವ್ಯವಸ್ಥಿತ ತಾರತಮ್ಯ’ ಇಲ್ಲ ಎಂದು ಹೇಳಿದೆ.

ಆದರೆ ಗ್ರೇಸಿ ಅವರಿಗೆ ಹಲವು ಪತ್ರಕರ್ತರು #IStandWithCarrie ಹ್ಯಾಶ್‌ಟ್ಯಾಗ್‌ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬ್ರಿಟನ್: ಸಂಸತ್ತಿನ ಅಂತರ್ಜಾಲದಲ್ಲಿ ಅಶ್ಲೀಲ ಜಾಲತಾಣ ಭೇಟಿಗೆ ಯತ್ನ

ಲಂಡನ್ (ಎಎಫ್‌ಪಿ): ಬ್ರಿಟನ್ ಸಂಸತ್ತಿನ ಅಂತರ್ಜಾಲ ಸೇವೆಯ ಸಂಪರ್ಕ ಪಡೆದ ಸಾಧನಗಳಿಂದ ಅಶ್ಲೀಲ ಅಂಶಗಳಿರುವ ಜಾಲತಾಣಗಳಿಗೆ ಭೇಟಿ ನೀಡಲು ಪ್ರತಿನಿತ್ಯ ಸುಮಾರು 160 ಮನವಿಗಳು ಸಲ್ಲಿಕೆಯಾಗಿವೆ ಎಂದು ಇಲ್ಲಿನ ಪತ್ರಕರ್ತರ ಸಂಘ (ಪಿ.ಎ– ಪ್ರೆಸ್ ಅಸೋಸಿಯೇಷನ್) ಸೋಮವಾರ ವರದಿ ಮಾಡಿದೆ.

ಕಳೆದ ಜೂನ್‌ನಲ್ಲಿ ನಡೆದ ಚುನಾವಣೆ ನಂತರ, ಅಶ್ಲೀಲ ಅಂಶಗಳಿರುವ ಜಾಲತಾಣಗಳಿಗೆ ಭೇಟಿ ನೀಡುವ ಒಟ್ಟು 24,473 ಪ್ರಯತ್ನಗಳು ನಡೆದಿವೆ ಎಂಬುದು ಪಿ.ಎ ವಿಶ್ಲೇಷಿಸಿದ ದತ್ತಾಂಶದಿಂದ ತಿಳಿದುಬಂದಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ಉದ್ದೇಶಪೂರ್ವಕವಾಗಿರಲಿಲ್ಲ ಎಂದೂ ಅದು ತಿಳಿಸಿದೆ.

ಸಂಸತ್ತಿನ ಅಂತರ್ಜಾಲ ಸಂಪರ್ಕವನ್ನು ಸಂಸದರು, ಮೇಲ್ಮನೆ ಸದಸ್ಯರು ಮತ್ತು ಅವರ ಸಿಬ್ಬಂದಿ ಬಳಸುತ್ತಾರೆ. ವೆಸ್ಟ್‌ಮಿನಿಸ್ಟರ್ ಕಚೇರಿಯಲ್ಲಿರುವ ಸಚಿವ ಡೇಮಿಯನ್ ಗ್ರೀನ್ ಅವರ ಕಂಪ್ಯೂಟರ್‌ನಲ್ಲಿ 2008ರಲ್ಲಿ ಲೈಂಗಿಕ ಪ್ರಚೋದನಕಾರಿ ಅಂಶಗಳು ಪತ್ತೆಯಾದ ಪ್ರಕರಣದಲ್ಲಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಈ ಬಗೆಯ ಹಲವು ಪ್ರಕರಣಗಳಿಂದಾಗಿ ಪ್ರಧಾನಿ ತೆರೆಸಾ ಮೇ ನೇತೃತ್ವದ ಸರ್ಕಾರ ಮುಜುಗರಕ್ಕೆ ಒಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT