ಬೆಂಗಳೂರು: ಮ್ಯಾಕ್ಸ್ ಲೈಫ್ ಇನ್‌ಶ್ಯೂರೆನ್ಸ್ ಕಂಪನಿ, ಪೊಲೀಸ್ ಇಲಾಖೆ ಹಾಗೂ ಯುಎಫ್ ಅಕಾಡೆಮಿ ಸಹಯೋಗದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆಯೋಜಿಸಿದ್ದ ‘ದಿ ರನ್’ ಜಾಗೃತಿ ಓಟವು ಗರುಡಾ ಮಾಲ್ ಬಳಿಯ ಸುಲೇಮಾನ್ ಹಾಕಿ ಮೈದಾನ
ದಲ್ಲಿ ಭಾನುವಾರ ನಡೆಯಿತು.

ಟೆನಿಸ್ ಆಟಗಾರ ಶ್ರೀನಾಥ್ ಪ್ರಹ್ಲಾದ್, ಮ್ಯಾರಥಾನ್ ಪಟು ವೈಶಾಲಿ ಕಸ್ತೂರೆ ಸೇರಿದಂತೆ 1,500ಕ್ಕೂ ಹೆಚ್ಚು ಜನ ಓಟದಲ್ಲಿ ಪಾಲ್ಗೊಂಡಿದ್ದರು.

21 ಕಿ.ಮೀ.ವಿಭಾಗದ ಓಟದಲ್ಲಿ ಧರ್ಮೇಂದ್ರ ರೆಡ್ಡಿ ಹಾಗೂ ರಾಜಶ್ರೀ ತನ್ಹಾಲ್, 10 ಕಿ.ಮೀ ವಿಭಾಗದಲ್ಲಿ ನಿರ್ಮಲ್ ಕುಮಾರ್, ಶೃತಿ ಕಡೆಮನೆ ಹಾಗೂ ತಿಪ್ಪವ್ವ ಸಣ್ಣಕ್ಕಿ, 5 ಕಿ.ಮೀ. ವಿಭಾಗದಲ್ಲಿ ಪಾಟೇಶ್ವರಿ ಸಿಂಗ್, ಅನನ್ಯ ದೀಪ್ ಹಾಗೂ 2.5 ಕಿ.ಮೀ. ವಿಭಾಗದಲ್ಲಿ ಕ್ಲಿಂಟನ್ ಮಿರಾನ್ ವಿಜೇತರಾದರು. ಓಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಯಿತು.

ಕಂಪನಿಯ ಮಾರ್ಕೆಂಟಿಂಗ್ ವಿಭಾಗ ನಿರ್ದೇಶಕ ಮಾಣಿಕ್ ನಂಗಿಯಾ ‘ಓಟದಲ್ಲಿ ಎಲ್ಲ ವಯೋಮಾನದವರು ಭಾಗಿಯಾಗಿರುವುದು ಸಂತಸ ತಂದಿದೆ. ಆರೋಗ್ಯ ಕಾಪಾಡಿಕೊಳ್ಳಲು ಇಂಥ ಓಟಗಳು ಅಗತ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.