ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಜನರ ಬಂಧನ; ನಗರದಲ್ಲಿ ನಿಷೇಧಾಜ್ಞೆ

Last Updated 9 ಜನವರಿ 2018, 10:23 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದ ಹೊರವಲಯದ ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ ರಾತ್ರಿ ಮಾಂಸ ಸೇವನೆ ಮಾಡಿದ ವಿಚಾರವಾಗಿ ಹಿಂದೂ ಮತ್ತು ಮುಸ್ಲಿಮ್ ಯುವಕರ ನಡುವೆ ಘರ್ಷಣೆ ನಡೆದಿದೆ. ಈ ಸಂಬಂಧ ಪಲ್ಲಿಗರಪಾಳ್ಯದ ಕೃಷ್ಣ, ಪ್ರಶಾಂತ, ದೇವರಾಜ, ಸುಬ್ರಮಣಿ, ಪ್ರವೀಣ, ಶಿವಕುಮಾರ್ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಕೊಂಡೇನಹಳ್ಳಿ ಗ್ರಾಮಕ್ಕೆ ವಿವಾಹಕ್ಕೆ ಬಂದಿದ್ದ ಮುಸ್ಲಿಮ್ ಸಮುದಾಯದ ಯುವಕರು ಬೆಟ್ಟದಲ್ಲಿ ಮಾಂಸ ಸೇವಿಸಿದ್ದಾರೆ. ಸ್ಥಳೀಯ ಯುವಕರು ಇದನ್ನು ಪ್ರಶ್ನಿಸಿದ್ದಾರೆ. ಆಗ ಎರಡೂ ಗುಂಪಿನ ನಡುವೆ ಘರ್ಷಣೆ ನಡೆದಿದೆ. ಮುಸ್ಲಿಮ್ ಯುವಕರ ಮೇಲೆ ಹಲ್ಲೆ ನಡೆದಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮುಸ್ಲಿಮ್ ಯುವಕರ ದೂರು ಆಧರಿಸಿ ನಗರ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. 

ಹಲ್ಲೆ ಖಂಡಿಸಿ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳ ಮುಖಂಡರು ಭಾನುವಾರ ರಾತ್ರಿ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದರು. ಪಲ್ಲಿಗರಪಾಳ್ಯದ ಯುವಕರನ್ನು ಬಂಧನ ವಿರೋಧಿಸಿ ಹಾಗೂ ಬೆಟ್ಟದಲ್ಲಿ ಮಾಂಸ ಸೇವಿಸಿದವರನ್ನೂ ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇವೆ, ಬಜರಂಗದಳ ಹಾಗೂ ಬಿಜೆಪಿ ಮುಖಂಡರು ಪೊಲೀಸರನ್ನು ಒತ್ತಾಯಿಸಿದರು. ಬಂಧಿತರ ಪರ   ಘೋಷಣೆ ಕೂಗಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಡಿವೈಎಸ್‍ಪಿಗಳಾದ ಬಿ.ಕೆ.ಉಮೇಶ್, ಅಬ್ದುಲ್ ಸತ್ತಾರ್, ಸಿಪಿಐ ಎ.ಸುಧಾಕರ್‍ ರೆಡ್ಡಿ, ಪಿಎಸ್‍ಐಗಳಾದ ಭೈರ, ಬಿ.ಟಿ.ಗೋವಿಂದು ಮಧ್ಯೆ ಪ್ರವೇಶಿಸಿ ಮುಖಂಡರ ಜತೆ ಚರ್ಚಿಸಿ ಶಾಂತಿ ಸಭೆ ನಡೆಸಿದರು.

ಸಭೆ ಮುಗಿದ ನಂತರ ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇವೆ, ಬಜರಂಗದಳ ಹಾಗೂ ಬಿಜೆಪಿ ಮುಖಂಡರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯಾಹ್ನದ ವರೆಗೆ ನಗರದಲ್ಲಿ ಬಿಗಿ ಪೊಲೀಸ್ ಬಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT