ಹಜ್‌: ಭಾರತದ ಕೋಟಾ ಹೆಚ್ಚಳ

7

ಹಜ್‌: ಭಾರತದ ಕೋಟಾ ಹೆಚ್ಚಳ

Published:
Updated:

ನವದೆಹಲಿ: ಭಾರತದ ಹಜ್‌ ಕೋಟಾವನ್ನು ಸತತ ಎರಡನೇ ವರ್ಷವೂ ಸೌದಿ ಅರೇಬಿಯಾ ಹೆಚ್ಚಿಸಿದೆ. ಈ ವರ್ಷ ಭಾರತದ 1,75,025 ಮಂದಿಗೆ ಹಜ್‌ ಯಾತ್ರೆ ಕೈಗೊಳ್ಳಲು ಅದು ಅವಕಾಶ ನೀಡಿದೆ.

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅವರು ಸೌದಿಯ ಉಮ್ರಾ ಸಚಿವ ಅರಾಬಿಯತ್‌ ಮಖಾಹ್‌ ಅವರೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಮೂರು ವರ್ಷಗಳ ಹಿಂದೆ ದೇಶದ 1,36,020 ಮಂದಿ ಹಜ್‌ ಯಾತ್ರೆ ಕೈಗೊಳ್ಳಬಹುದಿತ್ತು. ಕಳೆದ ವರ್ಷ 35 ಸಾವಿರ ಹೆಚ್ಚು ಯಾತ್ರಿಕರಿಗೆ ಸೌದಿ ಅವಕಾಶ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry