ಮೋದಿ, ಅಮಿತ್‌ ಷಾ, ಅನಂತಕುಮಾರ ಹೆಗಡೆ ಹಿಂದೂಗಳಲ್ಲ: ಪ್ರಕಾಶ್ ರೈ

7

ಮೋದಿ, ಅಮಿತ್‌ ಷಾ, ಅನಂತಕುಮಾರ ಹೆಗಡೆ ಹಿಂದೂಗಳಲ್ಲ: ಪ್ರಕಾಶ್ ರೈ

Published:
Updated:
ಮೋದಿ, ಅಮಿತ್‌ ಷಾ, ಅನಂತಕುಮಾರ ಹೆಗಡೆ ಹಿಂದೂಗಳಲ್ಲ: ಪ್ರಕಾಶ್ ರೈ

ಬೆಂಗಳೂರು: ‘ಅವರು ಹೇಳುತ್ತಾರೆ ನಾನು ಹಿಂದೂ ವಿರೋಧಿ ಎಂದು... ಅಲ್ಲ. ಮೋದಿ, ಅನಂತಕುಮಾರ ಹೆಗಡೆ, ಅಮಿತ್ ಷಾ ಅವರ ವಿರೋಧಿ ನಾನು. ನನ್ನ ಪ್ರಕಾರ ಅವರು ಹಿಂದೂಗಳಲ್ಲ’ ಹೀಗೆ ಹೇಳಿದ್ದು ನಟ ಪ್ರಕಾಶ್ ರೈ.

ಇಂಡಿಯಾ ಟುಡೇ ದಕ್ಷಿಣ ಶೃಂಗಸಭೆಯ ಚರ್ಚೆಯಲ್ಲಿ ಪಾಲ್ಗೊಂಡ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವೆಬ್‌ಸೈಟ್ ವರದಿ ಮಾಡಿದೆ.

ನಿರೂಪಕ ರಾಹುಲ್ ಕನ್ವಾಲ್, ಮಲಯಾಳದ ಸೆಕ್ಸಿ ದುರ್ಗಾ ಸಿನಿಮಾದ ನಿರ್ಮಾಪಕ ಶಶಿಧರನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಇಸಂ ಅನ್ನು ಅಳಿಸಿಹಾಕುತ್ತೇನೆ, ಒಂದು ಧರ್ಮವನ್ನೇ ಭೂಮಿಯಿಂದ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳುವ ಅನಂತಕುಮಾರ ಹೆಗಡೆಯವರು ಹಿಂದೂವಾಗಲಾರರು’ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಅಷ್ಟರಲ್ಲಿ ವೀಕ್ಷಕರ ಸಾಲಿನಲ್ಲಿದ್ದ ಬಿಜೆಪಿ ವಕ್ತಾರ, ಕೃಷ್ಣಸಾಗರ್ ರಾವ್ ಎಂದು ಗುರುತಿಸಿಕೊಂಡ ವ್ಯಕ್ತಿ ಮಧ್ಯಪ್ರವೇಶಿಸಲು ಮುಂದಾದರು. ಆದರೆ ಮತ್ತೆ ಮಾತು ಮುಂದುವರಿಸಿದ ಪ್ರಕಾಶ ರೈ, ‘ಹತ್ಯೆಯನ್ನು ಬೆಂಬಲಿಸುವ ವ್ಯಕ್ತಿಯೊಬ್ಬ ಹಿಂದೂವಾಗಲು ಸಾಧ್ಯವಿಲ್ಲ’ ಎಂದರು.

‘ನಾನು ಹಿಂದೂ ವಿರೋಧಿ ಎಂದು ಅವರು ನಿರ್ಧರಿಸಬಹುದಾದರೆ, ನಾನೂ ಅವರನ್ನು ನೀವು ಹಿಂದೂಗಳಲ್ಲ ಎಂದು ಹೇಳಬಹುದು. ಕೊಲ್ಲು ಎಂದು ಹೇಳುವ ವ್ಯಕ್ತಿಗಳು ನನ್ನ ದೃಷ್ಟಿಯಲ್ಲಿ ಹಿಂದೂಗಳಲ್ಲ’ ಎಂದೂ ರೈ ಹೇಳಿದರು.

ಕರ್ನಾಟಕ ಸರ್ಕಾರದಿಂದ ಸೈಟು ಪಡೆದ ಆರೋಪದ ಬಗ್ಗೆ ನಿರೂಪಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈ, ‘ನನ್ನಲ್ಲಿ ಸಾಕಷ್ಟು ಹಣ, ಆಸ್ತಿ ಇದೆ. ನನಗೆ ಸರ್ಕಾರದಿಂದ ಭೂಮಿ ಬೇಕಿಲ್ಲ’ ಎಂದು ಹೇಳಿದರು.

ಸೆಕ್ಸಿ ದುರ್ಗಾ ಸಿನಿಮಾಕ್ಕೆ ಬೆಂಬಲ ವ್ಯಕ್ತ‍ಡಿಸಿದ ರೈ, ಈ ಸಿನಿಮಾ ಹಿಂದುತ್ವ ಮತ್ತು ಹಿಂದೂ ವಿರೋಧಿಯಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry