ಗ್ಯಾಜೆಟ್ ಸುರಕ್ಷತೆ ನಿರ್ಣಯಗಳು

7

ಗ್ಯಾಜೆಟ್ ಸುರಕ್ಷತೆ ನಿರ್ಣಯಗಳು

Published:
Updated:
ಗ್ಯಾಜೆಟ್ ಸುರಕ್ಷತೆ ನಿರ್ಣಯಗಳು

ಹೊಸ ವರ್ಷದ ಆರಂಭದ ಘಟ್ಟದಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯ ಜತೆಗೆ ನಿರ್ಣಯಗಳನ್ನು ಕೈಗೊಳ್ಳುವುದು ಸಹಜ ಪ್ರಕ್ರಿಯೆ! ಕಿರಿಯರಿಂದ ಹಿಡಿದು ಹಿರಿಯರು ಕೂಡ ನಾನಾ ರೀತಿಯ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಆದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ನಿರ್ಣಯ ತೆಗೆದುಕೊಳ್ಳಬಹುದು ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ.

2017ನೇ ವರ್ಷದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ಮಾಹಿತಿ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗಿತ್ತು. ಹಾಗಾಗಿ ಈ ಸಲ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಗ್ಯಾಜೆಟ್‌ಗಳನ್ನು ರಕ್ಷಣೆ ಮಾಡಿಕೊಳ್ಳುವುದು ಈ ವರ್ಷದ ನಿರ್ಣಯವಾಗಬೇಕು ಎಂದು ತಂತ್ರಜ್ಞಾನ ಕ್ಷೇತ್ರದ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2016ನೇ ವರ್ಷದಲ್ಲಿ ಇ-ತ್ಯಾಜ್ಯ ನಿರ್ವಹಣೆ ಹಾಗೂ ಗ್ಯಾಜೆಟ್‌ಗಳ ಸಮರ್ಪಕ ಬಳಕೆ ಕುರಿತು ಜಾಗತಿಕವಾಗಿ ನಿರ್ಣಯ ಕೈಗೊಳ್ಳಲು ಸಲಹೆ ನೀಡಲಾಗಿತ್ತು. ಈ ಸಲ ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವುದರ ಜತೆಗೆ ಗ್ಯಾಜೆಟ್‌ಗಳು ವೈರಸ್ ದಾಳಿಗೆ ತುತ್ತಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲು ಸಲಹೆ ಮಾಡಲಾಗಿದೆ.

ಕಳೆದ ವರ್ಷ 15 ದೇಶಗಳಲ್ಲಿ ಲಕ್ಷಾಂತರ ಕಂಪ್ಯೂಟರ್‌ಗಳು ಸೈಬರ್‌ ದಾಳಿಗೆ ತುತ್ತಾಗಿ ನಾಶವಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ಯಾಜೆಟ್‌ಗಳ ಬಳಕೆದಾರರು ಕೈಗೊಳ್ಳಬೇಕಾದ ನಿರ್ಣಯಗಳು ಹೀಗಿವೆ. ಕಾಲ ಕಾಲಕ್ಕೆ ಸರಿಯಾಗಿ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವುದು, ಗ್ಯಾಜೆಟ್‌ಗಳ ಪಾಲಿಸಿ ಓದಿಕೊಳ್ಳುವುದು, ಅನವಶ್ಯಕ ಆ್ಯಪ್‌ಗಳನ್ನು ಡಿಲೀಟ್ ಮಾಡುವುದು, ವಿಪಿಎನ್ ಬಳಕೆ ಮಾಡುವುದು, ಕಾಲಕಾಲಕ್ಕೆ ಗ್ಯಾಜೆಟ್ ಹಾರ್ಡ್‌ವೇರ್‌ ತಪಾಸಣೆ ಮಾಡುವಂತಹ ನಿರ್ಣಯಗಳನ್ನು ಕೈಗೊಳ್ಳಬೇಕು.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry