ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಉಳಿಸಿ ಆಂದೋಲನ ಅಭಿಯಾನ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ನೆರೆಯ ಗೋವಾ ರಾಜ್ಯದ ‘ಗೋವಾ ಸುರಕ್ಷಾ ಮಂಚ್’ ಎಂಬ ಸಂಘಟನೆ ಮಹದಾಯಿ ಉಳಿಸಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದೆ.

ತಾಲ್ಲೂಕಿನ ಕಣಕುಂಬಿ ಹಾಗೂ ಗೋವಾದ ಸೂರಲ್ ಗ್ರಾಮಗಳ ಬಳಿಯ ಮಹದಾಯಿ ನದಿ ಪಾತ್ರದಲ್ಲಿ ಆಂದೋಲನ ನಡೆಸಲಾಯಿತು. ಸೂರಲ್ ಗ್ರಾಮದ ಸಾತೇರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಂಘಟನೆ ಮುಖಂಡ ಆನಂದ ಶಿರೋಡಕರ್, ‘ಮಹದಾಯಿ ನದಿ ಉಳಿಸಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ಏಳು ದಿನಗಳವರೆಗೆ ಆಂದೋಲನ ನಡೆಸಲಾಗುವುದು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮಹದಾಯಿ ಮತ್ತು ಅದರ ಉಪನದಿಗಳಿಂದ ಪವಿತ್ರ ಜಲವನ್ನು ಕುಂಭದಲ್ಲಿ ಶೇಖರಿಸಿ ಪೂಜೆ ಸಲ್ಲಿಸಲಾಗಿದೆ. ಈ ಜಲವನ್ನು ಮಹದಾಯಿ ಅಚ್ಚುಕಟ್ಟು ಪ್ರದೇಶದ ಜನರಿಗೆ ತೀರ್ಥರೂಪದಲ್ಲಿ ವಿತರಿಸಿ ನದಿಯ ಮಹತ್ವ ವಿವರಿಸುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಲಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT