ಬಜೆಟ್ ದಾಖಲೆ, ಭಾಷಣಕ್ಕೆ ಕತ್ತರಿ

7

ಬಜೆಟ್ ದಾಖಲೆ, ಭಾಷಣಕ್ಕೆ ಕತ್ತರಿ

Published:
Updated:
ಬಜೆಟ್ ದಾಖಲೆ, ಭಾಷಣಕ್ಕೆ ಕತ್ತರಿ

ನವದೆಹಲಿ: ಇದೇ ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಸರ್ಕಾರದ 2018–19ನೇ ಹಣಕಾಸು ವರ್ಷದ ಬಜೆಟ್‌ ದಾಖಲೆಗಳ ಗಾತ್ರ ಮತ್ತು ಭಾಷಣಕ್ಕೆ ಕತ್ತರಿ ಬೀಳಲಿದೆ.

ಈಗಾಗಲೇ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಪರೋಕ್ಷ ತೆರಿಗೆಗಳ ಬಹುತೇಕ ಪಾಲನ್ನು ಒಳಗೊಂಡಿರುವುದರಿಂದ ಬಜೆಟ್‌ ದಾಖಲೆಗಳ ‘ಭಾಗ ಬಿ’ದ ಪುಟಗಳ ಸಂಖ್ಯೆ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಭಾಷಣ ಗಮನಾರ್ಹವಾಗಿ ಮೊಟಕುಗೊಳ್ಳಲಿದೆ.

ಬಜೆಟ್‌ನ ‘ಭಾಗ ಬಿ’, ನೇರ ಮತ್ತು ಪರೋಕ್ಷ ತೆರಿಗೆ ಪ್ರಸ್ತಾವಗಳನ್ನು ಮತ್ತು ಸರ್ಕಾರದ ಹೊಸ ನೀತಿಗಳ ಪ್ರಕಟಣೆ ಒಳಗೊಂಡಿರುತ್ತದೆ. ಹೊಸ ಯೋಜನೆ, ಕಾರ್ಯಕ್ರಮ ಮತ್ತು ಸದ್ಯಕ್ಕೆ ಜಾರಿಯಲ್ಲಿ ಇರುವ ಕಾರ್ಯಕ್ರಮಗಳಲ್ಲಿನ ಬದಲಾವಣೆಗಳ ಮಾಹಿತಿ ಹೊಂದಿರುತ್ತದೆ. ಉದಾಹರಣೆಗೆ ಮುದ್ರಾ ಯೋಜನೆಯಲ್ಲಿನ ಬದಲಾವಣೆ, ಸ್ಟಾರ್ಟ್‌ಅಪ್‌ ಇಂಡಿಯಾ ಮತ್ತಿತರ ಹೊಸ ಉಪಕ್ರಮಗಳ ವಿವರಗಳು ಇದರಲ್ಲಿ ಇರಲಿವೆ. ಪರೋಕ್ಷ ತೆರಿಗೆಗಳ ಭಾಗವಾಗಿರುವ ಕಸ್ಟಮ್ಸ್‌ ಡ್ಯೂಟಿ ಕೂಡ ಇದರ ಅಂಗವಾಗಿರುತ್ತದೆ.

ಜಿಎಸ್‌ಟಿ ಕಾಯ್ದೆ ಸೇರಿದಂತೆ ಆಡಳಿತಾತ್ಮಕ ಬದಲಾವಣೆ ಕುರಿತ ವಿವರಗಳೂ ಈ ಭಾಗದಲ್ಲಿ ಇರಲಿವೆ. ಬಜೆಟ್‌ ಮುಂಚೆ ಜಿಎಸ್‌ಟಿ ದರಗಳಲ್ಲಿ ಮಾಡಲಾಗುವ ಬದಲಾವಣೆಗಳು ಕೂಡ ಬಜೆಟ್‌ನ ಈ ದಾಖಲೆಗಳ ಭಾಗವಾಗಿರಲಿವೆ.

ಎಕ್ಸೈಸ್‌ ಡ್ಯೂಟಿ ಮತ್ತು ಸೇವಾ ತೆರಿಗೆಗಳು ಈಗಾಗಲೇ ಜಿಎಸ್‌ಟಿಯಲ್ಲಿ ಸೇರಿಕೊಂಡಿರುವುದರಿಂದ ಇವುಗಳಿಗೆ ಸಂಬಂಧಿಸಿದ ಸುದೀರ್ಘ ಪಟ್ಟಿಯು ಈ ಬಾರಿಯ ಬಜೆಟ್‌ನಲ್ಲಿ ಇರಲಾರದು.

ಬಜೆಟ್‌ನ ವಿವಿಧ ಪುಟಗಳಿಗೆ ಸಂಬಂಧಿಸಿದ ಅನುಬಂಧಗಳು ಕೂಡ  ಈ ಬಾರಿಯ ಬಜೆಟ್‌ ಭಾಷಣದಲ್ಲಿ ಕಂಡುಬರುವುದಿಲ್ಲ. ಈ ಅನುಬಂಧಗಳು ಹೆಚ್ಚಾಗಿ ಎಕ್ಸೈಸ್‌ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿರುತ್ತವೆ.

ಬಜೆಟ್‌ನ ‘ಭಾಗ ಎ’ದಲ್ಲಿನ ಭಾಷಣವು ಒಟ್ಟಾರೆ ಆರ್ಥಿಕತೆಗೆ ಕೇಂದ್ರೀಕೃತರುವುದರಿಂದ ಆರ್ಥಿಕ ತಜ್ಞರಿಗೆ ಹೆಚ್ಚು ಮಹತ್ವದ್ದು ಆಗಿರಲಿದೆ. ವಿವಿಧ ವಲಯಗಳಿಗೆ ನಿಗದಿಪಡಿಸುವ ಬಜೆಟ್‌ ಅನುದಾನದ ವಿವರಗಳೂ ಇಲ್ಲಿಯೇ ಇರಲಿವೆ. ಹೊಸ ಯೋಜನೆಗಳ ಘೋಷಣೆ, ಸರ್ಕಾರದ ಆದ್ಯತೆಗಳ ಮಾಹಿತಿ ಕೂಡ ಈ ಭಾಗದಲ್ಲಿ ಇರಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ಅಗತ್ಯ

ನವದೆಹಲಿ:
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ತೆರಿಗೆ ದರಗಳ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಉದ್ಯಮ ವಲಯ ಅಭಿಪ್ರಾಯಟ್ಟಿದೆ.

ಕೇಂದ್ರ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದ್ದು ಆರ್ಥಿಕ ಪ್ರಗತಿಗೂ ಅನುಕೂಲವಾಗಲಿದೆ.

ಥಾಯ್ಲೆಂಡ್‌, ಮಲೇಷ್ಯಾ ಮತ್ತು ಸಿಂಗಪುರದೊಂದಿಗೆ ಪೈಪೋಟಿ ನಡೆಸಲು ಜಾಗತಿಕ ದರದಲ್ಲಿ ಸೇವೆಗಳನ್ನು ನೀಡಬೇಕು ಎಂದು ಮೇಕ್‌ಮೈ ಟ್ರಿಪ್‌ ಸ್ಥಾಪಕ ದೀಪ್ ಕಾಲ್ರಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry