6

ಪರಿಷ್ಕೃತ ಪ್ಯಾರಿಸ್ ಒಪ್ಪಂದಕ್ಕೆ ಟ್ರಂಪ್ ಸಹಿ?

Published:
Updated:

ಲಂಡನ್ : ಪ್ಯಾರಿಸ್ ಹವಾಮಾನ ವೈಪರೀತ್ಯ ತಡೆ ಒಪ್ಪಂದ ಪರಿಷ್ಕರಣೆಗೆ ಒಳಗಾದರೆ ತಾವು ಸಹಿ ಹಾಕುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಪ್ಪಂದದಲ್ಲಿ ಹಲವು ಮುಖ್ಯ ಬದಲಾವಣೆಗಳಾಗಬೇಕು ಎಂದು ಅವರು ಷರತ್ತು ಹಾಕಿದ್ದಾರೆ.

ಅಮೆರಿಕದ ಆರ್ಥಿಕತೆಗೆ ಹೊಡೆತ ನೀಡುವ ಒಪ್ಪಂದವಿದು ಎಂದು 2017ರ ಜೂನ್‌ನಲ್ಲಿ ಆರೋಪಿಸಿದ್ದ ಟ್ರಂಪ್, ಅಮೆರಿಕ ಇದರಿಂದ ಹೊರಬರಲಿದೆ ಎಂದು ಘೋಷಿಸಿದ್ದರು. ಇದಕ್ಕೆ ಜಗತ್ತಿನಾದ್ಯಂತ ಟೀಕೆಯನ್ನೂ ಅವರು ಎದುರಿಸಿದ್ದರು.

ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಸಹಿ ಹಾಕಿದ್ದ ಈ ಒಪ್ಪಂದನನ್ನು ಟ್ರಂಪ್ ಆರಂಭದಿಂದಲೇ ಟೀಕಿಸುತ್ತಾ ಬಂದಿದ್ದರು. ಒಪ್ಪಂದದ ಬಗ್ಗೆ ತಮ್ಮ ಟೀಕೆಗಳಿಗೆ ಈಗಲೂ ಬದ್ಧರಾಗಿರುವ ಅವರು, ಅದರಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿದಲ್ಲಿ ಮಾತ್ರ ಒಪ್ಪುವ ಸಾಧ್ಯತೆಯಿದೆ ಎಂದಿದ್ದಾರೆ. ಬ್ರಿಟನ್‌ನ ಐಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

2015ರಲ್ಲಿ ಸುದೀರ್ಘ ಮಾತುಕತೆ ಬಳಿಕ 197 ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. 2030ರೊಳಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಕೆಲಸವನ್ನು ಸ್ವಇಚ್ಛೆಯಿಂದ ಮಾಡಲು ಎಲ್ಲ ದೇಶಗಳು ಒಪ್ಪಿಕೊಂಡಿದ್ದವು.

‘ಒಂದು ವೇಳೆ ಯಾರಾದರೂ ಒಪ್ಪಂದದಿಂದ ಹಿಂದೆ ಸರಿಯಿರಿ ಎಂದರೆ ಸಂತೋಷವಾಗಿ ಹಿಂದೆ ಸರಿಯುತ್ತೇನೆ. ಏಕೆಂದರೆ ಅಮೆರಿಕದ ವಿಚಾರದಲ್ಲಿ ಇದೊಂದು ಭಯಾನಕ ಹಾಗೂ ಅನ್ಯಾಯದ ಒಪ್ಪಂದ’ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದಾರೆ.

ಒಪ್ಪಂದಕ್ಕೆ ಮರಳುವ ಸುಳಿವನ್ನು ಟ್ರಂಪ್ ಅವರು ಇದೇ ತಿಂಗಳ ಆರಂಭದಲ್ಲಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry