ಮಿದುಳು ತೊಳೆಯಲು ಫಿನಾಯಿಲ್‌, ಪೊರಕೆ ರವಾನೆ

7

ಮಿದುಳು ತೊಳೆಯಲು ಫಿನಾಯಿಲ್‌, ಪೊರಕೆ ರವಾನೆ

Published:
Updated:

ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮಿದುಳು ಹಾಗೂ ಹೃದಯದಲ್ಲಿ ತುಂಬಿಕೊಂಡಿರುವ ಮಲವನ್ನು ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿ, ವಿವಿಧ ದಲಿತಪರ ಸಂಘಟನೆಗಳು ಸೋಮವಾರ ಕೇಂದ್ರ ಸರ್ಕಾರಕ್ಕೆ ಫಿನಾಯಿಲ್‌ ಹಾಗೂ ಪೊರಕೆಗಳನ್ನು ರವಾನಿಸಿದವು.

ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಡಾ. ಬಿ.ಆರ್‌. ಅಂಬೇಡ್ಕರ್‌ ಯುವ ಸೇನೆ, ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು,  ‘ಸಚಿವ ಹೆಗಡೆ, ಸಂವಿಧಾನ ಹಾಗೂ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸುವುದು ಅವರ ಮೂಲ ಉದ್ದೇಶವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ‘ಈ ದೇಶವನ್ನು ಸ್ವಚ್ಛ ಮಾಡುವವರು ದಲಿತ ಪೌರ ಕಾರ್ಮಿಕರು. ಮೂರು ತಿಂಗಳಾದರೂ ಸಂಬಳ ಸಿಗದೆ ಪರದಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ಈಗ ನಿಜವಾಗಿ ಸ್ವಚ್ಛಗೊಳಿಸಬೇಕಾಗಿರುವುದು ಮನುಸಂಸ್ಕೃತಿಯನ್ನು ಜಪಿಸುತ್ತ, ಅಸ್ಪೃಶ್ಯತೆಯನ್ನು ಜೀವಂತ ಇಡುತ್ತಿರುವವರ ನಾಲಿಗೆ ಹಾಗೂ ಹೃದಯವನ್ನು’ ಎಂದು ಅಂಬೇಡ್ಕರ್‌ ಯುವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸಂತೋಷ್ ಕಿಡಿ ಕಾರಿದರು.

‘ ಸಂವಿಧಾನ ವಿರೋಧಿ ಹೇಳಿಕೆ ನೀಡಿ ಮನುವಾದಿ ಪ್ರದರ್ಶಿಸುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರ ಮೆದಳು ಮತ್ತು ಹೃದಯದಲ್ಲಿ ತುಂಬಿಕೊಂಡಿರುವ ಮಲವನ್ನು ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ, ಮಾದಿಗ ದಂಡೋರ ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ಅವರಿಗೆ ಮನವಿ ಜತೆಗೆ ವಿನೂತನವಾಗಿ ಕೇಂದ್ರ ಸರ್ಕಾರಕ್ಕೆ ಫೆನಾಯಿಲ್ ಹಾಗೂ ಪೊರೆಕೆಗಳನ್ನು ರವಾನಿಸಿದರು.

‘ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನ ಹಾಗೂ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಹೆಗಡೆ ಅವರು ನೀಡುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸುವುದು ಅವರ ಮೂಲ ಉದ್ದೇಶವಾಗಿದೆ. ಸಂವಿಧಾನದಿಂದಲೇ ಕೇಂದ್ರ ಸಚಿವರಾಗಿದ್ದನ್ನು ಅವರು ಮರೆತಿದ್ದಾರೆ’ ಎಂದು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.

‘ ಈ ದೇಶವನ್ನು ಸ್ವಚ್ಛ ಮಾಡುವವರು ದಲಿತ ಪೌರ ಕಾರ್ಮಿಕರು ಅವರಿಗೆ ಮೂರು ತಿಂಗಳಾದರೂ ಸಂಬಳ ಸಿಗದೆ ಪರದಾಡುವ ಸ್ಥಿತಿ ದೇಶದಲ್ಲಿದೆ. ಆದರೆ ನಿಜವಾಗಿ ಸ್ವಚ್ಚವಾಗಬೇಕಾಗಿರುವುದು ಈ ದೇಶದಲ್ಲಿನ ಮನುಸಂಸ್ಕೃತಿಯನ್ನು ಜಪಿಸುತ್ತ, ಅಸ್ಪೃಶ್ಯತೆಯನ್ನು ಜೀವಂತಗೊಳಿಸುತ್ತಿರುವವರು ನಾಲಿಗೆ ಮತ್ತು ಹೃದಯ ಸ್ವಚ್ಛಗೊಳಿಸಬೇಕು’ ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಹೋರಾಟ ಸಮಿತಿ ಅಧ್ಯಕ್ಷ ರಾಘವೇಂದ್ರ ಸಾಲುಮನಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಡಿ.ಎಸ್. ದುರುಗೇಶ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಮಹೇಶ್, ಮಾಜಿ ಸೈನಿಕ ಎಚ್. ರಮೇಶ, ದಂಡೆಪ್ಪ, ಸಿಡ್ಲಪ್ಪ, ತಿಪ್ಪೇಸ್ವಾಮಿ, ಚೌಡಾಪುರ ಗಂಗಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry