ಬುಧವಾರ, ಡಿಸೆಂಬರ್ 11, 2019
20 °C

‘ಪುಣ್ಯ ಇನ್ನೊಂದೇ ವರ್ಷ ಉಳಿದಿದೆ’: ರಾಹುಲ್‌ ಗಾಂಧಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ಪುಣ್ಯ ಇನ್ನೊಂದೇ ವರ್ಷ ಉಳಿದಿದೆ’: ರಾಹುಲ್‌ ಗಾಂಧಿ

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಿದ ಬಜೆಟ್‌ ಕುರಿತು ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ.

‘ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ರೈತರಿಗೆ ನೀಡಿದ್ದ ‘ನ್ಯಾಯೋಚಿತ ಬೆಲೆ’ ಭರವಸೆ ಇನ್ನೂ ಈಡೇರಿಲ್ಲ. ಯುವಜನತೆಗೆ ಉದ್ಯೋಗಾವಕಾಶ ದೊರೆತಿಲ್ಲ. ಪುಣ್ಯಕ್ಕೆ ಇನ್ನೊಂದೇ ವರ್ಷ ಉಳಿದಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

‘ಈ ಬಜೆಟ್‌ನಲ್ಲಿ ಮಧ್ಯಮ ವರ್ಗ ಮತ್ತು ವ್ಯಾಪಾರಸ್ಥರಿಗೆ ಯಾವುದೇ ಪ್ರಯೋಜವಾಗಿಲ್ಲ. ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

‘ಪರಿವರ್ತನೀಯ ಬಜೆಟ್‌’
‘ದೇಶದ ಸಾಮಾನ್ಯ ಜನರು ಹಾಗೂ ರೈತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದಾಗಿದೆ. ಇದೊಂದು ‘ಪರಿವರ್ತನೀಯ ಬಜೆಟ್‌’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದ್ದಾರೆ.

*
I want congratulate Prime Minister Narendra Modi on announcing the world's biggest national health protection scheme. This budget is for the development of the poor, for farmers and increasing their income, senior citizens and women: Union Minister Smriti Irani pic.twitter.com/NseafQcGww

    *

In the 1 hour 45 minute speech, 1 hour was for the poor, this is indeed historic. The opposition has become too pessimistic: MJ Akbar,Union Minister #UnionBudget2018 pic.twitter.com/Chq7eNCXQJ

‘ಐತಿಹಾಸಿಕ ಬಜೆಟ್‌’
‘1 ಗಂಟೆ 45 ನಿಮಿಷದ ಭಾಷಣದಲ್ಲಿ 1 ಗಂಟೆ ಬಡವರ ಪರ ಯೋಜನೆಗಳಿಗೆ ಮೀಸಲಾಗಿತ್ತು. ಇದು ಐತಿಹಾಸಿಕ ಬಜೆಟ್‌ ಆಗಿದೆ. ವಿರೋಧ ಪಕ್ಷ ಇದರಿಂದ ತುಂಬ ನಿರಾಶೆಗೊಂಡಿದೆ’ ಎಂದು ಸಂಸದ ಎಂ.ಜೆ ಅಕ್ಬರ್‌ ಹೇಳಿದ್ದಾರೆ.

    *
Its a grand budget, lot of announcements for the poor, farmers and tribals. This budget will also cement India as a global economic power: HM Rajnath Singh #UnionBudget2018 pic.twitter.com/Wl7tlajbD0

‘ಮಹೋನ್ನತ ಬಜೆಟ್‌’
ಬಡವರು, ರೈತರು ಹಾಗೂ ಬುಡಕಟ್ಟು ಸಮುದಯದ ಏಳಿಗೆಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದು, ಮಹೋನ್ನತ ಬಜೆಟ್‌ ಇದಾಗಿದೆ. ಜತೆಗೆ, ಭಾರತ ಜಾಗತಿಕ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಬೆಳೆಯಲು ಈ ಬಜೆಟ್‌ ದಿಕ್ಸೂಚಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. 

*
Medical insurance of Rs 5 lakh for 10 crore families is a huge initiative. This is a historic budget: Union minister Nitin Gadkari #UnionBudget2018 pic.twitter.com/ZTu50ZxzI1

 

‘10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ವಿಮೆ ಘೋಷಿಸಲಾಗಿದೆ. ಇದು ಐತಿಹಾಸಿಕ ಬಜೆಟ್‌’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

*
Announcements regarding education, health and agriculture made.

ಸರ್ಕಾರಕ್ಕೆ ಅಭಿನಂದನೆಗಳು‌
‘10 ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ ₹5 ಲಕ್ಷ ವಿಮೆ ಘೋಷಿಸಿರುವುದು ಉತ್ತಮ ಕ್ರಮವಾಗಿದೆ. ಕೇಂದ್ರ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

*

ಬಜೆಟ್‌ ನಮಗೆ ತೃಪ್ತಿ ನೀಡಿಲ್ಲ
‘ನಾವು ಕೇಂದ್ರದ ಮುಂದಿಟ್ಟಿದ ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಈ ಬಜೆಟ್‌ ನಮಗೆ ತೃಪ್ತಿ ನೀಡಿಲ್ಲ’ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಯಾನಮಲಾ ರಾಮ ಕೃಷ್ಣುಡು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)