ಭಾನುವಾರ, ಜೂನ್ 7, 2020
30 °C
ಟಾಲಿವುಡ್

ಕಮಲ್‌ ಜೊತೆ ನಯನತಾರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲ್‌ ಜೊತೆ ನಯನತಾರಾ?

ಪಾತ್ರ ಹಾಗೂ ಸಿನಿಮಾ ವಿಷಯದಲ್ಲಿ ವಿಶೇಷತೆ ಮೆರೆವ ಕಮಲ್‌ ಹಾಸನ್‌ ಅವರ ‘ಇಂಡಿಯನ್‌ 2’ ಚಿತ್ರ ನಿರ್ಮಾಣವಾಗುವುದು ಬಹುತೇಕ ಅಂತಿಮವಾಗಿದೆ. ಎರಡು ದಶಕಗಳ ನಂತರ ಕಮಲ್‌ ಹಾಗೂ ನಿರ್ದೇಶಕ ಶಂಕರ್‌ ಈ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಚಿತ್ರದಲ್ಲಿ ಕಮಲ್‌ ಹಾಸನ್‌ ಅವರದ್ದು ಸ್ವಾತಂತ್ರ್ಯ ಹೋರಾಟಗಾರನ ಪಾತ್ರ.

ಚಿತ್ರದ ನಿರ್ದೇಶನ ಹಾಗೂ ಕಥೆಯ ಹೂರಣ ಕುತೂಹಲ ಹುಟ್ಟಿಸಿದಷ್ಟೇ ಚಿತ್ರಕ್ಕೆ ನಯನತಾರಾ ನಟಿಯಾಗುತ್ತಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಈ ವರ್ಷಾರ್ಧದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಕಮಲ್‌ ಹಾಸನ್‌ ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಸಾಕಷ್ಟು ತೂಕ ಕಳೆದುಕೊಳ್ಳಲಿದ್ದಾರೆ. ಈ ಫಿಟ್‌ನೆಸ್‌ ನಿರ್ವಹಣೆಗೆ ಅಮೆರಿಕದ ತಜ್ಞರೊಬ್ಬರು ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಯುವ ಮನಸುಗಳ ಅಚ್ಚುಮೆಚ್ಚಿನ ಅನಿರುದ್ಧ ರವಿಚಂದ್ರನ್‌ ಕೂಡ ಅಭಿನಯಿಸಲಿದ್ದು ಚಿತ್ರ ಒಟ್ಟಿಗೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣಗೊಳ್ಳಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.