ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಉಳಿವಿಗಾಗಿ ಸಂಕ್ರಾಂತಿ ಹಬ್ಬ

Last Updated 1 ಫೆಬ್ರುವರಿ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ಆರ್.ನಾರಾಯಣಪುರ ಕೆರೆ ಬಳಿ ಸ್ಥಳೀಯರು ‘ಕೆರೆ ಉಳಿವಿಗಾಗಿ ಸಂಕ್ರಾಂತಿ ಹಬ್ಬ’ ಹಮ್ಮಿಕೊಂಡಿದ್ದರು.

‘ಇಪ್ಪತ್ತು ವರ್ಷಗಳ ಹಿಂದೆ ನಾರಾಯಣಪುರ ಕೆರೆ ನೀರು ಶುದ್ಧವಾಗಿತ್ತು. ಸುತ್ತಮುತ್ತಲಿನ ಜನ ಈ ನೀರನ್ನೇ ಬಳಸುತ್ತಿದ್ದರು. ಕೆರೆ ದಂಡೆ ಮೇಲೆ ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ನಲ್ಲೂರುಹಳ್ಳಿ ಟಿ.ನಾಗೇಶ್‌ ಹೇಳಿದರು.

‘ಈಗ ಕೆರೆ ಸಂಪೂರ್ಣ ಮಲಿನಗೊಂಡಿದೆ. ಇಲ್ಲಿನ ನಿವಾಸಿಗಳು ಮನಸ್ಸು ಮಾಡಿದರೆ, ಕೆರೆಯನ್ನು ಮತ್ತೆ ಮೊದಲಿನಂತೆ ಮಾಡಬಹುದು’ ಎಂದು ಸಲಹೆ ನೀಡಿದರು.

ಸ್ಥಳೀಯ ನಿವಾಸಿಗಳ ಸಂಘದ ಮುಖ್ಯಸ್ಥರಾದ ರಮಣಿ ರಾಧಾಕೃಷ್ಣ, ‘ಕೆರೆಯನ್ನು ಉಳಿಸುವ ಭಾಗವಾಗಿ ದಂಡೆ ಮೇಲೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದೇವೆ. ಇದರಿಂದಾಗಿ ಸ್ಥಳೀಯರಲ್ಲಿ ಕೆರೆ ಬಗ್ಗೆ ಅರಿವು ಮೂಡಿದರೆ, ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ’ ಎಂದರು.

ಯುನಿಕ್ ಸಂಸ್ಥೆಯ ಅಜೇಯ, ‘ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿ ಜತೆ ಕೈಜೋಡಿಸಿದ್ದೇವೆ. ಹಂತ ಹಂತವಾಗಿ ಕೆರೆ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಹಬ್ಬದ ಸಡಗರದಲ್ಲಿ ಭಾಗವಹಿಸಿದ ಸ್ಥಳೀಯರು ಪರಸ್ಪರ ಎಳ್ಳುಬೆಲ್ಲ, ಕಬ್ಬು ಹಂಚಿಕೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT