ಭಾನುವಾರ, ಜೂನ್ 7, 2020
29 °C
ಕಾಡುಗೊಂಡನಹಳ್ಳಿ ಠಾಣೆಯ ನೂತನ ಕಟ್ಟಡ ಉದ್ಘಾಟನೆ

ಬಿಜೆಪಿ ಅಧಿಕಾರದ ಅವಧಿಯಲ್ಲೇ ಅಪರಾಧಗಳು ಹೆಚ್ಚು: ರಾಮಲಿಂಗಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಧಿಕಾರದ ಅವಧಿಯಲ್ಲೇ ಅಪರಾಧಗಳು ಹೆಚ್ಚು: ರಾಮಲಿಂಗಾರೆಡ್ಡಿ

ಬೆಂಗಳೂರು: ‘ಬಿಜೆಪಿ ಅಧಿಕಾರದ ಅವಧಿಯಲ್ಲೇ ಅಪರಾಧಗಳು ಹೆಚ್ಚಾಗಿದ್ದವು. ಅಪರಾಧಗಳ ಅಂಕಿ-ಅಂಶ ತಿಳಿದುಕೊಳ್ಳದ ಆ ಪ್ರಕ್ಷದ ಮುಖಂಡರು, ಕಾನೂನು ಸುವ್ಯವಸ್ಥೆ ಬಗ್ಗೆ ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕಾಡುಗೊಂಡನಹಳ್ಳಿ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಯಿಗೆ ಬಂದಂತೆ ಮಾತನಾಡಿ ಕೋಮು ಗಲಭೆ ಉಂಟು ಮಾಡಲು ಯತ್ನಿಸುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್‌.ಸುರೇಶ್ ಕುಮಾರ್‌ ಅವರ ಬಾಯಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ  ಯಡಿಯೂರಪ್ಪ ಬೀಗ ಹಾಕಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಅವರೆಲ್ಲರಿಗೂ ಸೂಚಿಸಬೇಕು’ ಎಂದು ರಾಮಲಿಂಗಾರೆಡ್ಡಿ ಹೇಳಿದರು.

**

ಹೋಮ ಮಾಡಿದ್ದಕ್ಕೆ ವಿರೋಧ

ಉದ್ಘಾಟನೆ ಪ್ರಯುಕ್ತ ನೂತನ ಕಟ್ಟಡದಲ್ಲಿ ಹೋಮ ಮಾಡಲಾಗಿದೆ. ಕೆಲ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮದ ವೇಳೆಯಲ್ಲೇ ಸಚಿವ ರಾಮಲಿಂಗಾರೆಡ್ಡಿ ಎದುರು ಅಸಮಾಧಾನ ತೋಡಿಕೊಂಡರು.

‘ಮೂಢನಂಬಿಕೆ ನಿಷೇಧಿಸಲು ಸರ್ಕಾರವೇ ಸಾಕಷ್ಟು ಕ್ರಮ ಕೈಗೊಂಡಿದೆ. ಇಲ್ಲಿ ಹೋಮ ಮಾಡಲಾಗುತ್ತಿದೆ. ಪೊಲೀಸರೇ ಮೂಢನಂಬಿಕೆಯನ್ನು ಪೋಷಿಸುತ್ತಿದ್ದಾರೆ‍’ ಎಂದು ಸ್ಥಳೀಯರು ದೂರಿದರು.

‘ಮನೆಯ ಗೃಹ ಪ್ರವೇಶದಲ್ಲಿ ಹೋಮ ಮಾಡಿಕೊಂಡರೆ ನಮ್ಮದೇನು ಅಭ್ಯಂತರವಿಲ್ಲ. ಎಲ್ಲ ಧರ್ಮ, ಜಾತಿಯ ಜನರು ಬಂದು ಹೋಗುವ, ಅವರಿಗೆ ನ್ಯಾಯ ಕೊಡಿಸುವ ಠಾಣೆಯಲ್ಲಿ ಹೋಮ ಮಾಡುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.