ಭಾನುವಾರ, ಜೂನ್ 7, 2020
29 °C

ವಜ್ರ ವ್ಯಾಪಾರಿ ವಿರುದ್ಧ ₹280 ಕೋಟಿ ವಂಚನೆ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

ವಜ್ರ ವ್ಯಾಪಾರಿ ವಿರುದ್ಧ ₹280 ಕೋಟಿ ವಂಚನೆ ಆರೋಪ

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 280.70 ಕೋಟಿ ವಂಚನೆ ಮಾಡಿದ ಆರೋಪದಲ್ಲಿ ಕೋಟ್ಯಧಿಪತಿ, ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಮೇಲೆ ಸಿಬಿಐ ಪ್ರಕರಣ ದಾಖಲಿಸಿದೆ.

ಸುಳ್ಳು ದಾಖಲೆ ಸಲ್ಲಿಸಿ ಸಾಲ ಪಡೆದು ಬ್ಯಾಂಕ್‌ಗೆ ಭಾರಿ ನಷ್ಟ ಮಾಡಲಾಗಿದೆ ಎಂಬ ಆರೋಪಿಸಿ ನೀರವ್ ಅವರ ಸೋದರ ನಿಶಾಲ್, ಪತ್ನಿ ಆ್ಯಮಿ, ಉದ್ಯಮದ ಪಾಲುದಾರ ಮೆಹುಲ್ ಚಿನುಭಾಯ್ ಚೊಕ್ಸಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘ವಿದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳಲು ಅಲ್ಪಾವಧಿ ಸಾಲ ಪಡೆಯುವ ಸಲುವಾಗಿ ಸುಳ್ಳು ದಾಖಲೆ ನೀಡಿದ್ದಾರೆ. ಬ್ಯಾಂಕ್‌ನ ಸಿಬ್ಬಂದಿಯೂ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಬ್ಯಾಂಕ್ ದೂರಿನಲ್ಲಿ ತಿಳಿಸಿದೆ.

ಆದರೆ ಉದ್ಯಮ ಸಂಸ್ಥೆಗಳು ಈ ಆರೋಪಗಳನ್ನು ತಳ್ಳಿಹಾಕಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.