ನಡುರಸ್ತೆಯಲ್ಲೇ ರೌಡಿಶೀಟರ್‌ ಹತ್ಯೆ

7

ನಡುರಸ್ತೆಯಲ್ಲೇ ರೌಡಿಶೀಟರ್‌ ಹತ್ಯೆ

Published:
Updated:

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಮೀಪದ ನಂಜಪ್ಪ ಬಡಾವಣೆಯಲ್ಲಿ ರೌಡಿಶೀಟರ್‌ ಕುಮಾರ್‌ ಅಲಿಯಾಸ್‌ ಪೀಚು ಎಂಬಾತನನ್ನು ದುಷ್ಕರ್ಮಿಗಳು ಸೋಮವಾರ ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಯಲಚೇನಹಳ್ಳಿ ನಿವಾಸಿಯಾದ ಕುಮಾರ್‌, ಕೆಲಸ ನಿಮಿತ್ತ ಸಂಜೆ  4.30ರ ಸುಮಾರಿಗೆ ನಂಜಪ್ಪ ಬಡಾವಣೆಗೆ ಬಂದಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿದ ಮೂವರು ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳನ್ನು ಬೀಸಿದ್ದಾರೆ. ಜೀವಭಯದಿಂದ ತಪ್ಪಿಸಿಕೊಂಡ ಓಡಲಾರಂಭಿಸಿದ ಆತನನ್ನು ಬೆನ್ನಟ್ಟಿ ಹೋದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಟ್ಟಿದ್ದಾನೆ’ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ವಿವರಿಸಿದರು.

ಕೊಲೆ, ಕೊಲೆಗೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಮಾರ್‌, ರೌಡಿ ಸೈಕಲ್ ರವಿಯ ಸಹಚರನಾಗಿದ್ದ. ಬನಶಂಕರಿ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಕುಮಾರ್‌ನ ಹೆಸರಿತ್ತು ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry