ಗುರುವಾರ , ಜೂನ್ 4, 2020
27 °C

ನಗರ ಜಿಲ್ಲೆಯಲ್ಲಿ 907 ಮದ್ಯದಂಗಡಿಗಳಿಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರ ಜಿಲ್ಲೆಯಲ್ಲಿ 907 ಮದ್ಯದಂಗಡಿಗಳಿಗೆ ಅನುಮತಿ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 2017–18 ರ ಸಾಲಿನಲ್ಲಿ ಒಟ್ಟು 907 ಮದ್ಯದಂಗಡಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಗುರುವಾರ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವಂತೆ ಇರುವ 3566 ಮದ್ಯದಂಗಡಿಗಳಿಗೆ ಪರವಾನಿಗೆ ನವೀಕರಿಸಿ ಅನುಮತಿ ನೀಡಲಾಗಿದೆ ಎಂದರು.

ಸುಪ್ರೀಂಕೋರ್ಟ್‌ ಆದೇಶವು ಮುನ್ಸಿಪಲ್‌ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ಪರವಾನಿಗೆ ನವೀಕರಿಸಲಾಗಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ 2016–17 ರಲ್ಲಿ 3957 ಮದ್ಯದಂಗಡಿ ಮತ್ತು 440 ಎಂಎಸ್‌ಐಎಲ್‌ ಶಾಪ್‌, 2017–18 ರಲ್ಲಿ 3893 ಮದ್ಯದಂಗಡಿ ಮತ್ತು 530 ಎಂಎಸ್‌ಐಎಲ್‌ ಶಾಪ್‌ ಆರಂಭಿಸಲು ಅನುಮತಿ ನೀಡಲಾಗಿದೆ.

ನಗರ ಜಿಲ್ಲೆ ಮದ್ಯದಂಗಡಿ ವಿವರ:

ಬೆಂಗಳೂರು ನಗರ ಜಿಲ್ಲೆ(ಪೂರ್ವ) 207, ಬೆಂಗಳೂರು ನಗರ ಜಿಲ್ಲೆ (ಪಶ್ಚಿಮ) 231, ಬೆಂಗಳೂರು ನಗರ ಜಿಲ್ಲೆ(ಉತ್ತರ) 224, ಬೆಂಗಳೂರು ನಗರ ಜಿಲ್ಲೆ(ದಕ್ಷಿಣ) 245.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.