ಕಂಬಳಿ ಕದ್ದು ಸಿಕ್ಕಿ ಬಿದ್ದ ಕಾನ್‌ಸ್ಟೆಬಲ್‌ಗಳು

7

ಕಂಬಳಿ ಕದ್ದು ಸಿಕ್ಕಿ ಬಿದ್ದ ಕಾನ್‌ಸ್ಟೆಬಲ್‌ಗಳು

Published:
Updated:
ಕಂಬಳಿ ಕದ್ದು ಸಿಕ್ಕಿ ಬಿದ್ದ ಕಾನ್‌ಸ್ಟೆಬಲ್‌ಗಳು

ಮಂಡ್ಯ: ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭೀಷೇಕದ ತಾತ್ಕಾಲಿಕ ವಸತಿಗೃಹಗಳಲ್ಲಿ ಮಂಡ್ಯ ಜಿಲ್ಲೆ, ಭಾರತೀನಗರ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು ಕಂಬಳಿ ಕದ್ದು ಸಿಕ್ಕಿಬಿದ್ದಿದ್ದಾರೆ.

ಕಾನ್‌ಸ್ಟೆಬಲ್‌ಗಳಾದ ಶ್ರೀನಿವಾಸ್‌ ಮತ್ತು ಯೋಗಣ್ಣ ಕಳ್ಳತನ ಮಾಡಿದ ಆರೋಪಿಗಳು. ಮಹಾಮಸ್ತಕಾಭಿಷೇಕದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇಬ್ಬರೂ ಕಾನ್‌ಸ್ಟೆಬಲ್‌ಗಳನ್ನು ಭದ್ರತಾ ಕೆಲಸದಿಂದ ಬಿಡುಗಡೆಗೊಳಿಸಿ ವಾಪಸ್‌ ಕಳುಹಿಸಿದ್ದಾರೆ. ನೇರವಾಗಿ ಹಾಸನ ಎಸ್ಪಿಯೇ ಪತ್ರ ಬರೆದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry