ಶುಕ್ರವಾರ, ಡಿಸೆಂಬರ್ 13, 2019
27 °C

ಲಾಲ್ ಬಹದ್ದೂರ್ ಶಾಸ್ತ್ರಿ ಮಾಡಿದ್ದ ಸಾಲ ತೀರಿಸಿದ್ದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಲ್ ಬಹದ್ದೂರ್ ಶಾಸ್ತ್ರಿ ಮಾಡಿದ್ದ ಸಾಲ ತೀರಿಸಿದ್ದ ಪತ್ನಿ

ನವದೆಹಲಿ: ‘ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕಾರು ಖರೀದಿಸಲು ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನಿಂದ ಪಡೆದಿದ್ದ ಸಾಲವನ್ನು, ಅವರ ಪತ್ನಿ ಲಲಿತಾಶಾಸ್ತ್ರಿ ಮರುಪಾವತಿ ಮಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ವೈರಲ್ ಆಗಿದೆ.

ಶಾಸ್ತ್ರಿ ಅವರು 1964ರಲ್ಲಿ ಫಿಯೆಟ್‌ ಕಾರು ಖರೀದಿಸಲು ಪಿಎನ್‌ಬಿ ಬ್ಯಾಂಕ್‌ನಿಂದ ₹5000 ಸಾಲ ಪಡೆದಿದ್ದರು. ಆದರೆ 1966ರ ಜ.11ರಂದು ಅವರು ಮೃತಪಟ್ಟಿದ್ದರು ಸಾಲ

ವನ್ನು ತಿರಿಸುವಂತೆ ಪಿಎನ್‌ಬಿ ಅಧಿಕಾರಿಗಳು ಶಾಸ್ತ್ರಿ ಕುಟುಂಬಕ್ಕೆ ಪತ್ರ ಬರೆದಿದ್ದರು. ನಂತರ ಅವರ ಪತ್ನಿ ತಮ್ಮ ಪಿಂಚಣಿ ಹಣದಲ್ಲಿ ಬ್ಯಾಂಕ್‌ ಸಾಲ ಮರುಪಾವತಿ ಮಾಡಿದ್ದರು ಎಂದು ತರೂರ್‌ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)