ಚಿಕ್ಕೋಡಿ, ಗೋಕಾಕನ್ನು ಜಿಲ್ಲೆಯಾಗಿ ಘೋಷಿಸಲು ಆಗ್ರಹ

7

ಚಿಕ್ಕೋಡಿ, ಗೋಕಾಕನ್ನು ಜಿಲ್ಲೆಯಾಗಿ ಘೋಷಿಸಲು ಆಗ್ರಹ

Published:
Updated:

ರಾಯಬಾಗ: ಚಿಕ್ಕೋಡಿ ಹಾಗೂ ಗೋಕಾಕನ್ನು ಜಿಲ್ಲೆಗಳನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಕನ್ನಡಪರ ಸಂಘಟನೆಯವರು ತಹಶೀಲ್ದಾರ್ ಕೆ.ಎನ್.ರಾಜಶೇಖರ ಅವರಿಗೆ ಮನವಿ ಸಲ್ಲಿಸಿದರು.

ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಿಕ್ಕೋಡಿ ಹಾಗೂ ಗೋಕಾಕಅನ್ನು ಜಿಲ್ಲೆಯಾಗಿ ಘೋಷಣೆ ಮಾಡಿ ಅದು ಕರ್ನಾಟಕ ರಾಜ್ಯ ಪತ್ರದಲ್ಲಿಯೂ ದಾಖಲಾಗಿತ್ತು. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಹೊಸ ತಾಲ್ಲೂಕುಗಳಾದರೂ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆ ಘೋಷಣೆಯಾಗಲಿಲ್ಲ.

ಆದ್ದರಿಂದ ಈ ಕೂಡಲೇ ಮುಖ್ಯಮಂತ್ರಿಗಳು ಈ ಭಾಗದ ಬಹುದಿನಗಳ ಬೇಡಿಕೆಯಾದ ಚಿಕ್ಕೋಡಿ ಹಾಗೂ ಗೋಕಾಕ, ಇವೆರಡನ್ನು ಜಿಲ್ಲೆಗಳನ್ನಾಗಿ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಚೂನಪ್ಪ ಪೂಜೇರಿ, ತ್ಯಾಗರಾಜ ಕದಮ, ಗುರುನಾಥ ಹೆಗಡೆ, , ದಸ್ತಗಿರ ಮುಲ್ಲಾ, ಶಿವಾಜಿ ಪಾಟೀಲ, ಸಿದ್ರಾಮ ಬಟನೂರೆ ಸೇರಿದಂತೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry