24–2–1968, ಶನಿವಾರ

7

24–2–1968, ಶನಿವಾರ

Published:
Updated:

ಕಛ್ ತೀರ್ಪಿಗೆ ಕೇಂದ್ರದ ಒಪ್ಪಿಗೆ: ಲೋಕಸಭೆಯಲ್ಲಿ ಇಂದಿರಾ ಪ್ರಕಟಣೆ

ವರದಿ: ನಾರಾಯಣ ಸ್ವಾಮಿ

ನವದೆಹಲಿ
, ಫೆ. 23– ಕಛ್ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಮಂಡಲಿಯ ತೀರ್ಪನ್ನು ಭಾರತ ಒಪ್ಪಿಕೊಳ್ಳುತ್ತದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

‘ಸಹಜವಾಗಿಯೇ ನಾವು ನಮ್ಮ ವಚನವನ್ನು ಗೌರವಿಸುತ್ತೇವೆ, ನಮ್ಮ ಅಂತರರಾಷ್ಟ್ರೀಯ ವಾಗ್ದಾನಗಳನ್ನು ಪೂರೈಸಲು ನಾವು ವಿಫಲರಾದರೆ ಅದು ನಿಜಕ್ಕೂ ವಿಷಾದಕರ ದಿನವಾಗಿ ಪರಿಣಮಿಸುವುದು ಎಂದು ನನ್ನ ಭಾವನೆ’ ಎಂದರು ಅವರು.

ವಿರೋಧ ಪಕ್ಷಗಳ ‘ದೋಷೈಕ ದೃಷ್ಟಿ’ಗೆ ಖಂಡನೆ

ನವದೆಹಲಿ, ಫೆ. 23– ವಿರೋಧ ಪಕ್ಷಗಳ ಭ್ರಮೆ ಹೊಸ ವರ್ಷದಲ್ಲಿ ನಿವಾರಣೆಯಾಗಿದೆ. ಚುನಾವಣೆಯ ನಂತರ ಅವುಗಳಿಗೆ ಇದ್ದ ‘ಕೆಚ್ಚು’ ಈಗ ಕಳೆದು ಹೋಗಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಲೋಕಸಭೆಯಲ್ಲಿ ಹೇಳಿದರು.

ರಾಜಕೀಯವಾಗಿ ಸುಭದ್ರತೆ ಪಡೆಯುವುದು ಭಾರತಕ್ಕೆ ಸಾಧ್ಯವೇ ಎಂದು ಕಳೆದ ಮಹಾಚುನಾವಣೆಗಳ ಫಲಿತಾಂಶ ಸಮಯದಲ್ಲಿ ಇಡೀ ಜಗತ್ತು ಕಾತರದಿಂದ ನಿರೀಕ್ಷಿಸುತ್ತಿತ್ತು.  ಭಾರತ ಇಂದು ಸುಭದ್ರವಾಗಿದ್ದರೆ, ಅದಕ್ಕೆ ಕೇಂದ್ರ ಶಕ್ತಿಯುತವಾಗಿರುವುದೇ ಕಾರಣ ಎಂದರು ಶ್ರೀಮತಿ ಗಾಂಧಿ.

ಆರ್ಥಿಕ ಹಿಂಜರಿತ ನಿವಾರಣೆಗೆ ತೀವ್ರ ಕ್ರಮ

ನವದೆಹಲಿ, ಫೆ. 23– ರಾಷ್ಟ್ರದ ಅರ್ಥ ವ್ಯವಸ್ಥೆಯನ್ನು ಅದು ಈಗ ಎದುರಿಸುತ್ತಿರುವ ಹಿಂಜರಿತದ ಅಪಾಯದಿಂದ ಪಾರು ಮಾಡಲು, ಸರ್ಕಾರ ರಫ್ತು ವ್ಯಾಪಾರವನ್ನು ತೀವ್ರ ಪ್ರಮಾಣದಲ್ಲಿ ವೃದ್ಧಿಗೊಳಿಸುವ ಪ್ರಮುಖ ಕಾರ್ಯಕ್ರಮವನ್ನು ಕೈಗೊಳ್ಳಲಿದೆ.

ಇಂದು ಸಂಸತ್ತಿನಲ್ಲಿ ಮಂಡಿಸಲ್ಪಟ್ಟ 1967–68ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ‘ಹಿಂಜರಿತ’ ಎಂಬ ಅಧ್ಯಾಯದಲ್ಲಿ ಮೇಲಿನ ಕ್ರಮವನ್ನು ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry