ಮ್ಯಾಕ್ರನ್‌–ಮೋದಿ ಗಂಗಾ ವಿಹಾರ

7

ಮ್ಯಾಕ್ರನ್‌–ಮೋದಿ ಗಂಗಾ ವಿಹಾರ

Published:
Updated:
ಮ್ಯಾಕ್ರನ್‌–ಮೋದಿ ಗಂಗಾ ವಿಹಾರ

ವಾರಾಣಸಿ/ಉತ್ತರ ಪ್ರದೇಶ: ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಮತ್ತು ಪತ್ನಿ ಬ್ರಿಗಿಟ್‌ ಸೋಮವಾರ ಗಂಗಾ ನದಿಯಲ್ಲಿ ದೋಣಿ ವಿಹಾರ ನಡೆಸಿದರು.

ಮ್ಯಾಕ್ರನ್‌ ದಂಪತಿಯ ದೋಣಿ ವಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜತೆ ನೀಡಿದರು.

ಶೆಹನಾಯಿ ವಾದನ ಮತ್ತು ಹೂವಿನ ಮಳೆಗರೆದು ದಂಪತಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಅಸ್ಸಿ ಮತ್ತು ಅಶ್ವಮೇಧ ಘಾಟ್‌ ನಡುವೆ ದೋಣಿಯಲ್ಲಿ 20 ನಿಮಿಷ ವಿಹಾರ ನಡೆಸಿದ ಗಣ್ಯರತ್ತ ನದಿಯ ತಟದಲ್ಲಿ ನೆರೆದಿದ್ದ ಸಾವಿರಾರು ಜನರು ಮತ್ತು ಶಾಲಾ ಮಕ್ಕಳು ಕೈಬೀಸಿ ಹರ್ಷ ವ್ಯಕ್ತಪಡಿಸಿದರು. ಸ್ಥಳೀಯ ಕಲಾವಿದರು ಭಗವಾನ್‌ ಗೌತಮ ಬುದ್ಧ ಮತ್ತು ರಾಮಲೀಲಾ ಪ್ರಸಂಗಗಳನ್ನು ಪ್ರದರ್ಶಿಸಿದರು.

ಸೌರಶಕ್ತಿ ಘಟಕಕ್ಕೆ ಚಾಲನೆ: ಮೋದಿ ಮತ್ತು ಮ್ಯಾಕ್ರನ್‌ ಅವರು ಮಿರ್ಜಾಪುರ ಜಿಲ್ಲೆಯ ಚನ್ವೆ ಎಂಬಲ್ಲಿ ಸ್ಥಾಪಿಸಲಾಗಿರುವ ಉತ್ತರ ಪ್ರದೇಶದ ಅತ್ಯಂತ ದೊಡ್ಡ ಸೌರಶಕ್ತಿ ಘಟಕವನ್ನು ಸೋಮವಾರ ಉದ್ಘಾಟಿಸಿದರು. 75 ಮೆಗಾವಾಟ್‌ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕವನ್ನು ಇಬ್ಬರು ಜತೆಯಾಗಿ ದೇಶಕ್ಕೆ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry