ಅಕ್ರಮ ಸಾಗಣೆ: ₹93 ಲಕ್ಷ ಮೌಲ್ಯದ ಚಿನ್ನ ಜಪ್ತಿ

7

ಅಕ್ರಮ ಸಾಗಣೆ: ₹93 ಲಕ್ಷ ಮೌಲ್ಯದ ಚಿನ್ನ ಜಪ್ತಿ

Published:
Updated:
ಅಕ್ರಮ ಸಾಗಣೆ: ₹93 ಲಕ್ಷ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ₹93 ಲಕ್ಷ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿರುವ ಕಸ್ಟಮ್ಸ್‌ ಅಧಿಕಾರಿಗಳು, ನಾಲ್ವರು ಪ್ರಯಾಣಿಕರನ್ನು ಬಂಧಿಸಿದ್ದಾರೆ.

ಕೇರಳದ ನಿವಾಸಿ ಶಂಸುದ್ದೀನ್ (34) ಎಂಬಾತ, ಇಂಡಿಗೊ ವಿಮಾನದಲ್ಲಿ ದುಬೈನಿಂದ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ. ಆತ ಧರಿಸಿದ್ದ ಬೆಲ್ಟ್‌ನಲ್ಲಿ 217 ಗ್ರಾಂ ಚಿನ್ನ ಸಿಕ್ಕಿತು ಎಂದು ಕಸ್ಟಮ್ಸ್‌ ಹೆಚ್ಚುವರಿ ಆಯುಕ್ತ ಹರ್ಷಾ ಉಮ್ರೆ ತಿಳಿಸಿದರು.

ಇನ್ನೊಂದು ಪ್ರಕರಣದಲ್ಲಿ ಕೇರಳದ ನಲಕಮ್ ಪರಂಬಾ ಮೊಹಮ್ಮದ್ ರಫಿಕ್ (27) ಎಂಬಾತ, ದುಬೈನಿಂದ ಬೆಂಗಳೂರಿಗೆ ಬುಧವಾರ ಬಂದಿದ್ದ. ರಾಸಾಯನಿಕಗಳ ಡಬ್ಬಿಯಲ್ಲಿ ಆತ 728 ಗ್ರಾಂ ಚಿನ್ನವಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದ ಎಂದರು.

ಮಂಗಳವಾರ (ಮಾ.20)ಶಾರ್ಜಾದಿಂದ ನಗರಕ್ಕೆ ಬಂದಿದ್ದ ಮುಸ್ತಫಾ ಪಲ್ಲಿಪುರ (38), ಬೆಲ್ಟ್‌ನಲ್ಲಿ 1003 ಗ್ರಾಂ ಚಿನ್ನವಿಟ್ಟುಕೊಂಡು ನಿಲ್ದಾಣದಿಂದ ಹೊರುತ್ತಿದ್ದ. ಇನ್ನೊಬ್ಬ ಆರೋಪಿ ಜಮಾಲುದ್ದೀನ್ (40), ದುಬೈನಿಂದ ಬಂದಿದ್ದ. ರಾಸಾಯನಿಕಗಳ ಡಬ್ಬಿಯಲ್ಲಿ 1000 ಗ್ರಾಂ ಚಿನ್ನವಿಟ್ಟುಕೊಂಡಿದ್ದ. ಅವರಿಬ್ಬರನ್ನೂ ಬಂಧಿಸಿ ಚಿನ್ನವನ್ನು ಜಪ್ತಿ ಮಾಡಲಾಗಿದೆ ಎಂದು ಹರ್ಷಾ ಉಮ್ರೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry