7

ವಕೀಲರ ಪರಿಷತ್‌ಗೆ ಶಾಂತಿಯುತ ಮತದಾನ

Published:
Updated:

ಬೆಂಗಳೂರು: ‘ರಾಜ್ಯ ವಕೀಲರ ಪರಿಷತ್‌ನ 25 ಸದಸ್ಯ ಸ್ಥಾನಗಳಿಗೆ ಮಂಗಳವಾರ ರಾಜ್ಯದಾದ್ಯಂತ ನಡೆದ ಚುನಾವಣೆ ಶಾಂತಿಯುತವಾಗಿತ್ತು’ ಎಂದು ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ತಿಳಿಸಿದ್ದಾರೆ.

‘ಕುಷ್ಟಗಿಯಲ್ಲಿ ಮತಪತ್ರಗಳ ಕ್ರಮಸಂಖ್ಯೆ ತಪ್ಪಾಗಿದ್ದವು ಹಾಗೂ ಮತದಾರರ ಪಟ್ಟಿಯೊಳಗಿದ್ದ ಸಂಖ್ಯೆಗಿಂತ ಕಡಿಮೆ ಇದ್ದ ಕಾರಣ ಅಲ್ಲಿನ ಚುನಾವಣೆಯನ್ನು ಮುಂದೂಡಲಾಗಿದೆ. ಇದೇ 31ರಂದು ಇಲ್ಲಿ ಮರು ಚುನಾವಣೆ ನಡೆಯಲಿದೆ’ ಎಂದು ಅವರು ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ 280 ಕೇಂದ್ರಗಳಲ್ಲಿ ಮತದಾನ ನಡೆದಿದೆ. ಬೆಂಗಳೂರಿನಲ್ಲಿ ಶೇ 64ರಷ್ಟು ಪ್ರಮಾಣದ ಮತ ಚಲಾವಣೆ ಆಗಿದೆ. ಇತರೆಡೆ ಎಷ್ಟು ಪ್ರಮಾಣದ ಮತ ಚಲಾವಣೆಯಾಗಿದೆ ಎಂಬುದರ ಬಗ್ಗೆ ಪರಿಷತ್‌ಗೆ ಪೂರ್ಣ ಪ್ರಮಾಣದ ವರದಿ ಬಂದಿಲ್ಲ. ಬುಧವಾರ ಬೆಳಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ’ ಎಂದು ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry