ನಿಂತಿದ್ದ ಟ್ರಕ್‌ಗೆ ಇನ್ನೋವಾ ಡಿಕ್ಕಿ: ಚಾಲಕ‌ ಸಾವು, ಎಂಟು ಮಂದಿಗೆ ಗಾಯ

7

ನಿಂತಿದ್ದ ಟ್ರಕ್‌ಗೆ ಇನ್ನೋವಾ ಡಿಕ್ಕಿ: ಚಾಲಕ‌ ಸಾವು, ಎಂಟು ಮಂದಿಗೆ ಗಾಯ

Published:
Updated:
ನಿಂತಿದ್ದ ಟ್ರಕ್‌ಗೆ ಇನ್ನೋವಾ ಡಿಕ್ಕಿ: ಚಾಲಕ‌ ಸಾವು, ಎಂಟು ಮಂದಿಗೆ ಗಾಯ

ಮಂಗಳೂರು: ಇಲ್ಲಿನ ಪಣಂಬೂರಿನ ಮಂಗಳಾ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಕಾರ್ಖಾನೆ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ತಡರಾತ್ರಿ ನಿಂತಿದ್ದ ಟ್ರಕ್‌ಗೆ ಇನ್ನೋವಾ ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕ ಹನುಮಂತಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಎಂಟು ಮಂದಿ ಗಾಯಗೊಂಡಿದ್ದಾರೆ.

ಪತ್ರಕರ್ತರಾದ ವಿ.ಬಿ.ಹಿರೇಮಠ ಮತ್ತು ಪ್ರಸನ್ನ ಹಿರೇಮಠ ಅವರ ಕುಟುಂಬದ ಸದಸ್ಯರು ಕೇರಳದ ಗುರುವಾಯೂರಿಗೆ ಹೋಗುತ್ತಿದ್ದಾಗ ಈ ಅಪಘಾತ‌ ಸಂಭವಿಸಿದೆ.

ಅಪಘಾತವಾದ ಕಾರಿನಲ್ಲಿ ಪ್ರಸನ್ನ ಅವರ ಪತ್ನಿ, ಇಬ್ಬರು ಮಕ್ಕಳು ಇದ್ದರು. ಒಟ್ಟು ನಾಲ್ಕು ಮಕ್ಕಳು ಕಾರಿನಲ್ಲಿದ್ದರು.

ಗಾಯಾಳುಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry