ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕೊ ಬ್ಯಾಂಕ್‌: ₹4.5 ಕೋಟಿ ಲಾಭ

8 ಹೊಸ ಶಾಖೆ ಪ್ರಾರಂಭಿಸಲು ಕೋರಿ ಆರ್‌ಬಿಐಗೆ ಅರ್ಜಿ
Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಸುಕೊ ಬ್ಯಾಂಕ್‌, 2017–18ರ ಆರ್ಥಿಕ ವರ್ಷದಲ್ಲಿ ₹ 806 ಕೋಟಿ ವಹಿವಾಟು ನಡೆಸಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘₹ 490 ಕೋಟಿ ಠೇವಣಿ ಸಂಗ್ರಹಿಸಿದ್ದು, ₹ 316 ಕೋಟಿ ಸಾಲ ನೀಡಲಾಗಿದೆ. ಅಲ್ಲದೇ, ₹ 3 ಕೋಟಿ ಆದಾಯ ತೆರಿಗೆ ಪಾವತಿಸಲಾಗಿದೆ. ಆರ್ಥಿಕ ವರ್ಷದಲ್ಲಿ ₹ 7.90 ಕೋಟಿ ಲಾಭವಾಗಿದೆ. ನಿವ್ವಳ ಲಾಭ ₹ 4.5 ಕೋಟಿ ಆಗಿದ್ದು, ಅದರಲ್ಲಿ ಬ್ಯಾಂಕ್‌ನ ಷೇರುದಾರರಿಗೆ ಶೇ 14 ರಷ್ಟು ಲಾಭಾಂಶ ನೀಡಲಾಗುವುದು.

‘ಈ ವರ್ಷದಲ್ಲಿ ತುಮಕೂರು, ಚಿತ್ರದುರ್ಗ (2ನೇ ಶಾಖೆ), ಹೊಳಲ್ಕೆರೆ, ಹೊಸಪೇಟೆ (2ನೇ ಶಾಖೆ), ಶಿರಸಿ, ಹುನಗುಂದ, ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ಆರ್‌ಬಿಐಗೆ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಶಾಖೆಗಳು 20 ಇವೆ.

‘ಬ್ಯಾಂಕ್‌ನ ಗ್ರಾಹಕರಿಗೆ ಮೇ 1ರಿಂದ ಭೀಮ್, ಫೋನ್‌ ಪೇ, ತೇಜ್‌ ಹಾಗೂ ಪೇಟಿಎಂಗಳಲ್ಲಿ ವ್ಯವಹರಿಸುವ ಸೌಲಭ್ಯ ಕಲ್ಪಿಸಲಾಗುವುದು. ಆರ್‌ಬಿಐನಿಂದ ಐಎಫ್‌ಎಸ್‌ಸಿ ಕೋಡ್‌ ಪಡೆಯುವುದರ ಮೂಲಕ ಕೋಡ್ ಪಡೆದ ಉತ್ತರ ಕರ್ನಾಟಕದ ಮೊದಲ ಸಹಕಾರಿ ಬ್ಯಾಂಕ್ ಎನಿಸಲಿದೆ’ ಎಂದರು.

ಉತ್ತಮ ಕೃಷಿಕ, ಕೃಷಿ ತಂತ್ರಜ್ಞ ಪ್ರಶಸ್ತಿ
‘ಬ್ಯಾಂಕ್‌ನ ಬೆಳ್ಳಿಹಬ್ಬ ಆಚರಣೆಗೆ ಸಿದ್ಧತೆ ನಡೆದಿದ್ದು, ಕೃಷಿಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತಮ ಕೃಷಿಕರಾಗಿ ಬೆಳಗಾವಿ ಜಿಲ್ಲೆಯ ಅಜ್ಜಪ್ಪ ಕುಳಗೋಡು ಮತ್ತು ಉತ್ತಮ ಕೃಷಿ ತಂತ್ರಜ್ಞರಾಗಿ ಧಾರವಾಡ ಜಿಲ್ಲೆಯ ನವಲಗುಂದದ ಧರ್ಮಾರೆಡ್ಡಿ ಲಕ್ಕಣ್ಣವರ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹1 ಲಕ್ಷ ನಗದು ಒಳಗೊಂಡಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT