ಶುಕ್ರವಾರ, ಜೂಲೈ 3, 2020
28 °C
ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ 14ರವರೆಗೆ ಅವಕಾಶ

8ಕ್ಕೆ ಮತಗಟ್ಟೆವಾರು ‘ಮಿಂಚಿನ ಆಂದೋಲನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

8ಕ್ಕೆ ಮತಗಟ್ಟೆವಾರು ‘ಮಿಂಚಿನ ಆಂದೋಲನ’

ಚಿಕ್ಕಮಗಳೂರು: ಮತದಾರರ ಪಟ್ಟಿ ಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಇದೇ 8ರಂದು ಮತಗಟ್ಟೆವಾರು ‘ಮಿಂಚಿನ ಆಂದೋಲನ’ ಆಯೋಜಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಬುಧವಾರ ತಿಳಿಸಿದರು.ಈವರೆಗೆ ನೋಂದಣಿಯಾಗದಿರುವ ಅರ್ಹ ಮತದಾರರು ವಿಶೇಷ ಆಂದೋಲನದ ಮೂಲಕ ನೋಂದಾ ಯಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. 2018ರ ಜನವರಿ 1ಕ್ಕೆ 18 ವರ್ಷ ತುಂಬಿದವರು ನೋಂದಾ ಯಿಸಿಕೊಳ್ಳಬಹುದು. 8ರಂದು ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರದಲ್ಲಿ ಹಾಜರಿದ್ದು ಅರ್ಜಿಗಳನ್ನು ಪಡೆಯುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾರರ ಹೆಸರು ನೋಂದಾಯಿಸಲು ಇದೇ 14ರವರೆಗೆ ಅವಕಾಶ ಇದೆ. ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದರೆ ಸೇರಿಸಬಹುದು. ಕುಟುಂಬದ ಸದಸ್ಯರು ಪೌತಿಯಾಗಿದ್ದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆಸಲು ಅವಕಾಶ ಇದೆ. 14ರವರೆಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರಿಸಿ, ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ನೀತಿಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ 3,094 ಪೋಸ್ಟರ್‌ ಮತ್ತು ಬ್ಯಾನರ್‌ಗಳು, 875 ಗೋಡೆಬರಹಗಳನ್ನು ತೆರವುಗೊಳಿ ಸಲಾಗಿದೆ. ಪೋಸ್ಟರ್‌, ಬ್ಯಾನರ್‌ಗಳು, ಗೋಡೆಬರಹಗಳು ಉಳಿದಿದ್ದರೆ ತೆರವಿಗೆ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ 22 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. 29 ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ರಚಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಏ.2ರವರೆಗೆ 239.325 ಲೀಟರ್‌ (₹1.06 ಲಕ್ಷ ಮೌಲ್ಯ) ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 32 ಪ್ರಕರಣ ದಾಖಲಿಸಲಾಗಿದೆ ಎಂದರು.

ಅನುಮತಿ ಪಡೆಯದೆ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದ ವಾಹನ ವೊಂದನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ದಾಖಲೆ ರಹಿತ ವಾಗಿ ಸಾಗಿಸುತ್ತಿದ್ದ ₹1.30 ಲಕ್ಷ ಹಣವನ್ನು ವಶಕ್ಕೆ ಪಡೆದು, ದೂರು ದಾಖಲಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷರಾಗಿರುವ ಸಮಿತಿಯು ಈ ದೂರಿನ ವಿಚಾರಣೆ ಮಾಡುತ್ತದೆ. ದಾಖಲೆರಹಿತ ಹಣದ ಮೊತ್ತ ₹ 10 ಲಕ್ಷಕ್ಕಿಂತ ಹೆಚ್ಚು ಇದ್ದರೆ ಅಂಥ ಪ್ರಕರಣಗಳನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸುತ್ತೇವೆ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಸಮರ್ಪಕ ಅನುಷ್ಠಾನ ನಿಟ್ಟಿನಲ್ಲಿ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಯನ್ನು ತೆರೆಯಲಾಗಿದೆ. ಇದು 24X7 ಕಾರ್ಯನಿರ್ವಹಿಸುತ್ತದೆ. ಶುಲ್ಕ ರಹಿತ ದೂರವಾಣಿ ಸಂಖ್ಯೆ 18004250122 ಸಂಪರ್ಕಿಸಿ ಸಾರ್ವಜನಿಕರು ದೂರು ನೀಡಬಹುದು ಎಂದು ತಿಳಿಸಿದರು.

ರಾಜಕೀಯ ಪಕ್ಷಗಳ ಮುಖಂಡರ ಕಾರುಗಳಲ್ಲಿ ಗಾಜಿಗೆ ಪಕ್ಷದ ಚಿಹ್ನೆಗ ಳನ್ನು ಅಳವಡಿಸಿಕೊಂಡಿದ್ದರೆ ಅದನ್ನು ತೆರೆವುಗೊಳಿಸಲು ಕ್ರಮವಹಿಸಲಾ ಗುವುದು. ಚುನಾವಣಾಧಿಕಾರಿಯಿಂದ ಅನುಮತಿ ಪಡೆದು ಅಳವಡಿಸಿಕೊಳ್ಳಲು ಅವಕಾಶ ಇದೆ. ಗುರುತಿನ ಚೀಟಿಗಳನ್ನು ಖಾಸಗಿ ವ್ಯಕ್ತಿಗಳು ಮತದಾರರಿಗೆ ತಲುಪಿ ಸುತ್ತಿದ್ದಾರೆ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದರು.

ತಪಾಸಣೆ ಕೇಂದ್ರಗಳಿಗೆ ಶಾಮಿ ಯಾನ ವ್ಯವಸ್ಥೆ ಮಾಡಲಾಗಿತ್ತು. ಮಳೆ ಶುರುವಾಗಿದೆ. ಹೀಗಾಗಿ, ಮಲೆನಾಡು ಪ್ರದೇಶಗಳಲ್ಲಿ ತಪಾಸಣೆ ಕೇಂದ್ರಗಳಲ್ಲಿ ಶೀಟ್‌ಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ತಹಶೀಲ್ದಾರ್‌ಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಯಾವುದೇ ಪಕ್ಷದವರು ಗ್ರಾಮಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವಂತಿಲ್ಲ ಎಂದು ಉತ್ತರಿಸಿದರು.

ಜಿಲ್ಲೆಯ ನಕ್ಸಲ್ ಪ್ರದೇಶದಲ್ಲಿ 34 ಮತಗಟ್ಟೆಗಳು ಇವೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಶೇ 75ಕ್ಕಿಂತ ಹೆಚ್ಚು ಮತದಾನ ಆಗಿತ್ತು. ಮತದಾನಕ್ಕೆ ತೊಂದರೆಯಾಗದಂತೆ ಪೊಲೀಸ್‌ ಭದ್ರತೆ ಒದಗಿಸಲಾಗುವುದು. ಈ ಪ್ರದೇಶದಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್‌ ಇದ್ದರು.

ಮತದಾರರ ಸಹಾಯ ಕೇಂದ್ರ ಆರಂಭ

ಕ್ಷೇತ್ರಾವಾರು ಮತದಾರರ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಖಾತರಿ ಪಡಿಸಿಕೊಳ್ಳಲು, ಮತದಾರರ ಪಟ್ಟಿಗೆ ಸಂಬಂಧಿಸಿದ ಇತರ ಮಾಹಿತಿ ಪಡೆಯಲು ಈ ಕೇಂದ್ರದ ದೂರವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

ಕ್ಷೇತ್ರ ಸಂಪರ್ಕ ಅಧಿಕಾರಿ ದೂರವಾಣಿ ಸಂಖ್ಯೆ

ಚಿಕ್ಕಮಗಳೂರು ಪುಟ್ಟಸ್ವಾಮಿ 08262231392 ಮೊ:9448744006

ಶೃಂಗೇರಿ ಬಿ.ಎಂ.ಮಲ್ಲಿಕಾರ್ಜುನ್‌ 08265221047 ಮೊ:9108456224

ಮೂಡಿಗೆರೆ ಬಿ.ಆರ್‌.ರಮೇಶ್‌ 08263220204 ಮೊ:9449924699

ತರೀಕೆರೆ ನೇತ್ರಾವತಿ 08261222259 ಮೊ:9620160621

ಕಡೂರು ವೀರೇಶ್‌ 08267221240 ಮೊ:9611858295

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.