ಗುರುವಾರ , ಡಿಸೆಂಬರ್ 12, 2019
20 °C

ಬೆಳ್ಳಿ ಗೆದ್ದ ಗುರುರಾಜ್‌ಗೆ ಸರ್ಕಾರಿ ಕೆಲಸ, ₹15 ಲಕ್ಷ ನಗದು ಬಹುಮಾನ: ಪ್ರಮೋದ್‌ ಮಧ್ವರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿ ಗೆದ್ದ ಗುರುರಾಜ್‌ಗೆ ಸರ್ಕಾರಿ ಕೆಲಸ, ₹15 ಲಕ್ಷ ನಗದು ಬಹುಮಾನ: ಪ್ರಮೋದ್‌ ಮಧ್ವರಾಜ್‌

ಉಡುಪಿ: ‘ಕ್ರೀಡಾನೀತಿಯ ಅನ್ವಯ ವೇಟ್‌ಲಿಫ್ಟರ್‌ ಗುರುರಾಜ್‌ ಅವರಿಗೆ ₹ 15 ಲಕ್ಷ ನಗದು ಹಾಗೂ ಸರ್ಕಾರಿ ಬಿ ಗ್ರೂಪ್‌ ಹುದ್ದೆ ಸಿಗಲಿದೆ. ತಿಂಗಳ ಹಿಂದೆಯಷ್ಟೇ ಅವರು ಏಕಲವ್ಯ ಪ್ರಶಸ್ತಿ ಗಳಿಸಿದ್ದರು. ಈಗ ಪದಕ ಗೆದ್ದಿರುವುದು ಸಂತಸ ತಂದಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗುರುವಾರ ನಡೆದ ಪುರುಷರ ವೇಟ್‌ಲಿಫ್ಟಿಂಗ್‌ನ 56 ಕೆ.ಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂದಾಪುರ ಸಮೀಪದ ಜೆಡ್ಡು ಚಿತ್ತೂರಿನ ಗುರುರಾಜ್‌ ಪೂಜಾರಿ ಬೆಳ್ಳಿ ಪದಕ ಜಯಿಸಿದರು. ಜತೆಗೆ ಮಹಿಳೆಯರ ವೇಟ್‌ಲಿಫ್ಟಿಂಗ್‌ನ 48 ಕೆ.ಜಿ ವಿಭಾಗದಲ್ಲಿ ಭಾರತದ ಸಾಯಿಕೋಮ್‌ ಮೀರಾಬಾಯಿ ಚಾನು ಚಿನ್ನ ಪದಕ ಗೆದ್ದಿದ್ದರು.

ಭಾರತ ಕ್ರೀಡಾಪಟುಗಳು ಇವರೆಗೆ 2 ಚಿನ್ನ, 1 ಬೆಳ್ಳಿ, 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ...

ಬೆಳ್ಳಿ ಗೆದ್ದ ‘ಕುಡ್ಲ’ದ ಗುರು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ದೀಪಕ್‌ ಲಾಥರ್‌ಗೆ ಕಂಚಿನ ಪದಕ

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಎರಡನೇ ಚಿನ್ನ ಗೆದ್ದ ಸಂಜಿತಾ ಚಾನು

ಕಾಮನ್‌ವೆಲ್ತ್ ಕ್ರೀಡಾಕೂಟ: ಭಾರತದ ಪರ ಮೊದಲ ಚಿನ್ನ ಗೆದ್ದ ಮೀರಾಬಾಯಿ ಚಾನು

ಪ್ರತಿಕ್ರಿಯಿಸಿ (+)