ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ

ಮಂಗಳವಾರ, ಮಾರ್ಚ್ 26, 2019
26 °C

ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ

Published:
Updated:
ಟಿಕೆಟ್ ₹2 ಕೋಟಿಗೆ ಮಾರಾಟ: ಎನ್‌.ಆರ್ ರಮೇಶ ಆರೋಪ

ಬೆಂಗಳೂರು: 72 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು‌ ಬಿಜೆಪಿ ಪ್ರಕಟಿಸುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಟಿಕೆಟ್ ಆಕಾಂಕ್ಷಿ ಎನ್‌.ಆರ್. ರಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಚಿಕ್ಕಪೇಟೆಯಲ್ಲಿ ಉದಯ ಗರುಡಾಚಾರ್‌ಗೆ ಟಿಕೆಟ್ ಖಚಿತವಾಗಿರುವುದು ಎನ್‌.ಆರ್. ರಮೇಶ ಅವರ ಕೋಪಕ್ಕೆ ಕಾರಣವಾಗಿದ್ದು, ಟಿಕೆಟ್ ₹2 ಕೋಟಿಗೆ ಮಾರಾಟವಾಗಿದೆ ಎಂದು ಅವರು ದೂರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್ .ಯಡಿಯೂರಪ್ಪ, 'ಯಾವುದೇ ಅಸಮಾಧಾನ ಇಲ್ಲ. ಟಿಕೆಟ್ ಸಿಗದೆ ಇದ್ದವರು ಅತೃಪ್ತಿ ವ್ಯಕ್ತಪಡಿಸಿರಬಹುದು. ರಮೇಶ ಸೇರಿದಂತೆ ಎಲ್ಲರನ್ನೂ ಕರೆದು ಮಾತನಾಡುತ್ತೇನೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry