‘ನನ್ನ ಮಗ ಭಾರತ ಹಾಕಿ ತಂಡ ಪ್ರತಿನಿಧಿಸಲಿ’

ಗುರುವಾರ , ಮಾರ್ಚ್ 21, 2019
27 °C

‘ನನ್ನ ಮಗ ಭಾರತ ಹಾಕಿ ತಂಡ ಪ್ರತಿನಿಧಿಸಲಿ’

Published:
Updated:
‘ನನ್ನ ಮಗ ಭಾರತ ಹಾಕಿ ತಂಡ ಪ್ರತಿನಿಧಿಸಲಿ’

ಕೋಲ್ಕತ್ತ: ‘ನನ್ನ ಕೊನೆಯ ಮಗ ಅಬ್ರಾಮ್‌ (5) ಹಾಕಿ ಆಟಗಾರನಾಗಬೇಕು. ಜಾಗತಿಕ ಮಟ್ಟದ ಹಾಕಿಯಲ್ಲಿ ಆತ ಭಾರತವನ್ನು ಪ್ರತಿನಿಧಿಸಬೇಕು’ ಎಂದು ಬಾಲಿವುಡ್‌ ನಟ ಶಾರುಖ್‌ ಖಾನ್‌ ಹೇಳಿದ್ದಾರೆ.

ಆರ್‌ಸಿಬಿ ಮತ್ತು ತಮ್ಮ ತಂಡ ಕೆಕೆಆರ್‌ ನಡುವಣ ಪಂದ್ಯವನ್ನು ಅವರು ಮಗ ಅಬ್ರಾಮ್‌ ಹಾಗೂ ಮಗಳು ಸುಹಾನಾ ಜೊತೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಬ್ರಾಮ್‌ ಇನ್ನೂ ಕ್ರಿಕೆಟ್‌ ಆಡಲು ಶುರು ಮಾಡಿಲ್ಲ. ಸದ್ಯಕ್ಕೆ, ಆತ ಫುಟ್‌ಬಾಲ್‌ ಆಡುತ್ತಿದ್ದಾನೆ. ಭಾರತದ ಪರವಾಗಿ ಆತ ಹಾಕಿ ಆಡಬೇಕು ಎಂಬುದು ನನ್ನ ಆಕಾಂಕ್ಷೆ’ ಎಂದು ಅವರು ತಿಳಿಸಿದ್ದಾರೆ.

2007ರಲ್ಲಿ ಬಿಡುಗಡೆಯಾಗಿದ್ದ ‘ಚಕ್‌ ದೇ ಇಂಡಿಯಾ’ ಹಿಂದಿ ಚಲನಚಿತ್ರದಲ್ಲಿ ಶಾರುಖ್‌ ಅವರು ಹಾಕಿ ತಂಡದ ಕೋಚ್‌ ಆಗಿ ಅಭಿನಯಿಸಿದ್ದರು. ವಿಶ್ವಕಪ್‌ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಕೋಚ್‌ ಆಗಿದ್ದ ಕಬೀರ್‌ ಖಾನ್‌ ಅವರ ಪಾತ್ರದಲ್ಲಿ ಮಿಂಚಿದ್ದ ಶಾರುಖ್‌, ಭಾರತದ ರಾಷ್ಟ್ರೀಯ ಕ್ರೀಡೆಗೆ ಸಂಬಂಧಿಸಿದ ಈ ಚಿತ್ರವು ತಮ್ಮ ವೃತ್ತಿಜೀವನದ ವಿಶೇಷ ಎಂದು ಹಲವು ಬಾರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry