ದಾಖಲೆ ಉತ್ತಮಪಡಿಸಿಕೊಂಡ ಅನಾಸ್‌

ಶುಕ್ರವಾರ, ಮಾರ್ಚ್ 22, 2019
23 °C
ಪದಕ ತಪ್ಪಿಸಿಕೊಂಡ ಭಾರತದ ಅಥ್ಲೀಟ್‌; ಮಹಿಳೆಯರ ವಿಭಾಗದಲ್ಲಿ ಹಿಮಾ ದಾಸ್ ಫೈನಲ್‌ಗೆ

ದಾಖಲೆ ಉತ್ತಮಪಡಿಸಿಕೊಂಡ ಅನಾಸ್‌

Published:
Updated:
ದಾಖಲೆ ಉತ್ತಮಪಡಿಸಿಕೊಂಡ ಅನಾಸ್‌

ಗೋಲ್ಡ್ ಕೋಸ್ಟ್‌: ಭಾರತದ ಮಹಮ್ಮದ್ ಅನಾಸ್‌ ಯಾಹಿಯಾ ಸ್ವಲ್ಪದರಲ್ಲೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕದಿಂದ ವಂಚಿತರಾದರು. ಮಂಗಳವಾರ ನಡೆದ ಪುರುಷರ 400 ಮೀಟರ್ಸ್ ಓಟದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದರು.

ಆದರೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಅವರು ಉತ್ತಮಪಡಿಸಿಕೊಂಡರು. ಒಂದು ಸೆಕೆಂಡು ಅಂತರದಲ್ಲಿ ಈ ಸಾಧನೆ ಮಾಡಿದರು.

1958ರಲ್ಲಿ ಮಿಲ್ಕಾ ಸಿಂಗ್ ಚಿನ್ನ ಗೆದ್ದಿದ್ದರು. ಅದರ ನಂತರ ಇದೇ ಮೊದಲ ಬಾರಿ ಭಾರತದ ಅಥ್ಲೀಟ್ ಒಬ್ಬರು ಕಾಮನ್‌ವೆಲ್ತ್ ಕೂಟದ 400 ಮೀಟರ್ಸ್ ಓಟದ ಫೈನಲ್‌ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ 45.44 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದ ಅನಾಸ್‌ ಮಂಗಳವಾರ 45.31 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು.

ಕಂಚು ಗೆದ್ದ ಜಮೈಕಾದ ಜವೋನ್ ಫ್ರಾನ್ಸಿಸ್ ಅವರಿಗಿಂತ 0.2 ಸೆಕೆಂಡುಗಳಿಂದ ಹಿಂದುಳಿದ ಅವರಿಗೆ ಪದಕ ಒಲಿಯಲಿಲ್ಲ.   ಬೋಟ್ಸ್ವಾನಾದ ಐಸಾಕ್ ಮಕ್ವಾಲ (44.35 ಸೆಕೆಂಡು) ಚಿನ್ನ ಗೆದ್ದರೆ ಅದೇ ದೇಶದ ಬಬಲೋಕಿ ತೆಬೆ ಬೆಳ್ಳಿ ಗೆದ್ದರು.

ಕಳೆದ ಬಾರಿ ದೆಹಲಿಯಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾಂಡ್ ಪ್ರೀ  ಕೂಟದಲ್ಲಿ 45.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದ ಅನಾಸ್‌ ದಾಖಲೆ ನಿರ್ಮಿಸಿದ್ದರು.

ಹಿಮಾ ದಾಸ್ ಫೈನಲ್‌ಗೆ‌: ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಭಾರತದ ಹಿಮಾ ದಾಸ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ 51.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ವೈಯಕ್ತಿಕ ಸಾಧನೆಯನ್ನು ಉತ್ತಮಪಡಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಜಮೈಕಾದ ಅನಸ್ತೇಸ್ಯಾ ಲಿ ರಾಯ್‌ ಮತ್ತು ಬೊಟ್ಸ್ವಾನದ ಅಮಂಟಲ್ ಮಾಂಟೊ ಮೊದಲ ಎರಡು ಸ್ಥಾನ ಗಳಿಸಿದರು. ಹಿಮಾ ಮೂರನೇಯವರಾಗಿ ಹೊರಹೊಮ್ಮಿದರು. ಫೈನಲ್‌ ಬುಧವಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry