ಬುಡಕಟ್ಟು ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

ಮಂಗಳವಾರ, ಮಾರ್ಚ್ 26, 2019
29 °C

ಬುಡಕಟ್ಟು ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

Published:
Updated:
ಬುಡಕಟ್ಟು ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

ಬಿಜಾಪುರ: ಪ್ರಧಾನಿ ನರೇಂದ್ರ ಮೋದಿಯವರು ಬುಡಕಟ್ಟು ಮಹಿಳೆಯೊಬ್ಬರಿಗೆ ಪಾದರಕ್ಷೆ ತೊಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬುಡಕಟ್ಟು ಮಹಿಳೆಯರಿಗೆ ಪಾದರಕ್ಷೆ ವಿತರಿಸುವ ಸಲುವಾಗಿ ಛತ್ತೀಸ್‌ಗಡ ಸರ್ಕಾರ ಹಮ್ಮಿಕೊಂಡಿರುವ ‘ಚರಣ್–ಪಾದುಕಾ’ ಯೋಜನೆಗೆ ಅಲ್ಲಿನ ಬಿಜಾಪುರದಲ್ಲಿ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಈ ವೇಳೆ ಬುಡಕಟ್ಟು ಮಹಿಳೆಯೊಬ್ಬರಿಗೆ ಅವರು ಪಾದರಕ್ಷೆ ತೊಡಿಸಿದ್ದಾರೆ. ಛತ್ತೀಸ್‌ಗಡದ ಮುಖ್ಯಮಂತ್ರಿ ರಮಣ್‌ ಸಿಂಗ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತೆಂಡು ಎಲೆ ಕೀಳುವುದಕ್ಕಾಗಿ ಕಾಡುಗಳಲ್ಲಿ ಸಂಚರಿಸುವ ಬುಡಕಟ್ಟು ಮಹಿಳೆಯರಿಗೆ ಪಾದರಕ್ಷೆ ವಿತರಿಸುವ ಸಲುವಾಗಿ ಅಲ್ಲಿನ ಸರ್ಕಾರ ‘ಚರಣ್–ಪಾದುಕಾ’ ಯೋಜನೆ ಹಮ್ಮಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry