ನೈಟ್ ಕ್ಲಬ್ ಉದ್ಘಾಟಿಸಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ !

ಮಂಗಳವಾರ, ಮಾರ್ಚ್ 19, 2019
26 °C

ನೈಟ್ ಕ್ಲಬ್ ಉದ್ಘಾಟಿಸಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ !

Published:
Updated:
ನೈಟ್ ಕ್ಲಬ್ ಉದ್ಘಾಟಿಸಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ !

ಲಖನೌ: ಇಲ್ಲಿನ ಅಲಿಗಂಜ್ ಪ್ರದೇಶದಲ್ಲಿ ನೈಟ್ ಕ್ಲಬ್‍ವೊಂದನ್ನು ಉದ್ಘಾಟಿಸಿ ಉನ್ನಾವೊ ಸಂಸದ ಸಾಕ್ಷಿ ಮಹಾರಾಜ್ ವಿವಾದಕ್ಕೀಡಾಗಿದ್ದಾರೆ.

ಬಿಜೆಪಿ ಸಂಸದ ಹಾಗೂ ಸಾಧು ಆಗಿರುವ ಸಾಕ್ಷಿ ಮಹಾರಾಜ್ ನೈಟ್ ಕ್ಲಬ್ ಉದ್ಘಾಟಿಸಿರುವುದಕ್ಕೆ ಟೀಕೆಗಳು ಕೇಳಿ ಬರುತ್ತಿವೆ. ಸುದ್ದಿ ಮಾಧ್ಯಮಗಳ ಪ್ರಕಾರ ಸಾಕ್ಷಿ ಮಹಾರಾಜ್  ಭಾನುವಾರ ಸಂಜೆ ನೈಟ್ ಕ್ಲಬ್ ಉದ್ಘಾಟನೆ ಮಾಡಿದ್ದರು.

ಆದಾಗ್ಯೂ, ಅದು ನೈಟ್ ಕ್ಲಬ್ ಎಂಬುದು ತನಗೆ ಗೊತ್ತಿರಲಿಲ್ಲ. ಉತ್ತರ ಪ್ರದೇಶದ ಬಿಜೆಪಿ ಮಾಜಿ ಅಧ್ಯಕ್ಷ ರಜ್ಜನ್ ಸಿಂಗ್ ಅವರು ತಮ್ಮ ಅಳಿಯನ ರೆಸ್ಟುರಾ ಉದ್ಘಾಟಿಸಲು ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ. ಅಲ್ಲಿಗೆ ಹೋದ ನಂತರವೇ ಅದೊಂದು ಬಾರ್ ಮತ್ತು ನೈಟ್ ಕ್ಲಬ್ ಎಂಬುದು ಗೊತ್ತಾಗಿದ್ದು. ನಾನೊಬ್ಬ  ಸಂಸದ ಮಾತ್ರ ಅಲ್ಲ ಸಾಧು ಕೂಡಾ. ಹಾಗಾಗಿ ಇಂಥಾ ವಿಷಯಗಳಿಂದ ದೂರವಿರಬೇಕಾಗಿತ್ತು ಎಂದು ಟೈಮ್ಸ್ ಆಫ್  ಇಂಡಿಯಾ ಪತ್ರಿಕೆಗೆ ಸಾಕ್ಷಿ ಮಹಾರಾಜ್ ಪ್ರತ್ರಿಕ್ರಿಯೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry