ಕಮಿನ್ಸ್ ಬದಲಿಗೆ ಆ್ಯಡಂ ಮಿಲ್ನೆ

ಮಂಗಳವಾರ, ಮಾರ್ಚ್ 19, 2019
28 °C

ಕಮಿನ್ಸ್ ಬದಲಿಗೆ ಆ್ಯಡಂ ಮಿಲ್ನೆ

Published:
Updated:
ಕಮಿನ್ಸ್ ಬದಲಿಗೆ ಆ್ಯಡಂ ಮಿಲ್ನೆ

ಮುಂಬೈ: ಬೆನ್ನು ನೋವಿನಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ ಬದಲಿಗೆ ನ್ಯೂಜಿಲೆಂಡ್ ಬೌಲರ್‌ ಆ್ಯಡಂ ಮಿಲ್ನೆ ಅವರಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ವಿಷಯವನ್ನು ತಂಡದ ಆಡಳಿತ ಖಚಿತಪಡಿಸಿದೆ.

ಐಪಿಎಲ್‌ ಹರಾಜಿನಲ್ಲಿ ಮಿಲ್ನೆಗೆ ₹ 75 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು. ಆದರೆ ಯಾವ ತಂಡವೂ ಅವರನ್ನು ಪಡೆದುಕೊಂಡಿರಲಿಲ್ಲ. ಕಳೆದ ಎರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದ ಅವರು ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು.

‘ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಪ್ಯಾಟ್ ಕುಮಿನ್ಸ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ‘ಬೋನ್‌ ಎಡಿಮಾ’ ಎಂಬ ಸಮಸ್ಯೆ ಕಾಡುತ್ತಿರುವುದು ಪತ್ತೆಯಾಗಿತ್ತು’ ಎಂದು ಆಸ್ಟ್ರೇಲಿಯಾದ ವೈದ್ಯ ಡೇವಿಡ್ ಬೀಕ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry