ಶುಕ್ರವಾರ, ಜೂನ್ 5, 2020
27 °C

ಬಿರುಗಾಳಿಗೆ ಹಾರಿದ ಮನೆಗಳ ಚಾವಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿರುಗಾಳಿಗೆ ಹಾರಿದ ಮನೆಗಳ ಚಾವಣಿ

ಹರಪನಹಳ್ಳಿ: ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿಗೆ ತಾಲ್ಲೂಕಿನ ಅರಸನಾಳು ನವಗ್ರಾಮದ ಒಂಬತ್ತು ಮನೆಗಳ ಚಾವಣಿ ಹಾರಿಹೋಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ.

ಯರಬಳ್ಳಿ ಮಂಜುಳಮ್ಮ, ಕರಿಯಮ್ಮ ನೆರ್ಕಿ, ಹಡಪದ ಗಂಗಮ್ಮ, ಕುರುವಪ್ಪನವರ ಬಸಮ್ಮ, ಸುಶೀಲಮ್ಮ ಭೀಮಪ್ಪ, ಹುಲಿಕಟ್ಟಿ ನಾಗರಾಜ, ನಿಂಗನಗೌಡರ ಮಾಳಮ್ಮನವರ, ಕಮ್ಮಾರ ಶಾಂತಮ್ಮ, ಬುಕಪ್ಪರ ಬಸಪ್ಪ ಅವರ ಮನೆ ಚಾವಣಿ ಕಿತ್ತು ಹೋಗಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಂಜೆ 6.30ರ ಸುಮಾರಿಗೆ ಭಾರಿ ಪ್ರಮಾಣದಲ್ಲಿ ಬೀಸಿದ ಗಾಳಿಯಿಂದಾಗಿ ಬೇವಿನಕಟ್ಟೆಯ ಮರ ಟೊಂಗೆ ಮುರಿದು ಬಿದ್ದಿದೆ. ಮಳೆ ಪ್ರಮಾಣಕ್ಕಿಂತ ಹೆಚ್ಚು ಬಿರುಗಾಳಿ ಜೋರಾಗಿತ್ತು. ಅರಸನಾಳು ಗ್ರಾಮದಲ್ಲಿರುವ ರಂಗಮಂದಿರದ ಚಾವಣಿ ಕಿತ್ತು‌ಹೋಗಿದೆ.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದ ನಾಯ್ಕ, ಗ್ರಾಮ ಲೆಕ್ಕಿಗ ರಾಜಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ ಬಂದು ಪರಿಶೀಲಿಸಿದ್ದಾರೆ.

ತಂಪೆರೆದ ಮಳೆ

ಸಂತೇಬೆನ್ನೂರು: ಸಂತೇಬೆನ್ನೂರು ಸೇರಿದಂತೆ ಹೋಬಳಿಯ ಹಲವೆಡೆ ಭಾನುವಾರ ಸಂಜೆ ಮಳೆಯ ಸಿಂಚನ ತಂಪೆರೆಯಿತು. ಒಂದು ವಾರದಿಂದ ತಾಪಮಾನ ಹೆಚ್ಚಿತ್ತು. ಬಿರು ಬಿಸಿಲಿಗೆ ಬಳಲಿದ ಮನಗಳಿಗೆ ಮಳೆ ಸಂತಸ ನೀಡಿತು. ಕೇವಲ 15 ನಿಮಿಷ ಕೆಲವೆಡೆ ಉತ್ತಮ ಮಳೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.