ಮಂಗಳವಾರ, ಆಗಸ್ಟ್ 11, 2020
27 °C

ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಪೋಥಾಸ್‌ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಪೋಥಾಸ್‌ ರಾಜೀನಾಮೆ

ಕೊಲಂಬೊ: ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ನಿಕ್‌ ಪೋಥಾಸ್‌ ಅವರು ಶ್ರೀಲಂಕಾ ತಂಡದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಮಂಗಳವಾರ ಬಹಿರಂಗಪಡಿಸಿದೆ.

44ರ ಹರೆಯದ ಪೋಥಾಸ್‌ ಅವರು 2016ರಲ್ಲಿ ಫೀಲ್ಡಿಂಗ್‌ ಕೋಚ್‌ ಆಗಿ ನೇಮಕವಾಗಿದ್ದರು. ಹೋದ ವರ್ಷದ ಜೂನ್‌ನಲ್ಲಿ ಗ್ರಹಾಂ ಫೋರ್ಡ್‌ ರಾಜೀನಾಮೆ ನೀಡಿದ್ದರಿಂದ ಪೋಥಾಸ್‌ ಅವರನ್ನು ಹಂಗಾಮಿ ಮುಖ್ಯ ಕೋಚ್‌ ಆಗಿ ನೇಮಿಸಲಾಗಿತ್ತು. ಶ್ರೀಲಂಕಾ ಕ್ರಿಕೆಟ್‌, ಡಿಸೆಂಬರ್‌ನಲ್ಲಿ ಚಂಡಿಕಾ ಹತುರುಸಿಂಘ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದ್ದರಿಂದ ನಿಕ್‌ ಅವರು ಮತ್ತೆ ಫೀಲ್ಡಿಂಗ್‌ ಕೋಚ್‌ ಆಗಿ ಕೆಲಸ ಮಾಡಿದ್ದರು.

‘ಶ್ರೀಲಂಕಾ ತಂಡದ ಜೊತೆಗೆ ಎರಡು ವರ್ಷ ಕೆಲಸ ಮಾಡಿದ್ದು ಖುಷಿ ನೀಡಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಫೀಲ್ಡಿಂಗ್‌ ಕೋಚ್‌ ಸ್ಥಾನಕ್ಕೆ

ರಾಜೀನಾಮೆ ನೀಡಿದ್ದೇನೆ’ ಎಂದು ಪೋಥಾಸ್‌ ತಿಳಿಸಿದ್ದಾರೆ.

‘ಶ್ರೀಲಂಕಾ ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಕೆಲ ಕಾಲ ಮುಖ್ಯ ಕೋಚ್‌ ಜವಾಬ್ದಾರಿಯನ್ನು ನಿಭಾಯಿಸಿದ್ದೆ. ಇದರಿಂದ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಇದಕ್ಕಾಗಿ ಶ್ರೀಲಂಕಾ ಕ್ರಿಕೆಟ್‌ಗೆ ಆಭಾರಿಯಾಗಿದ್ದೇನೆ’ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.