ಶನಿವಾರ, ಆಗಸ್ಟ್ 15, 2020
23 °C
ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾದ ವಾನರ ಸೇನೆ, ವಿಷ ಪ್ರಾಶನದ ಬಗ್ಗೆ ಪಶು ವೈದ್ಯರ ಶಂಕೆ

ಮೂರು ದಿನದಲ್ಲಿ 10 ಕೋತಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ದಿನದಲ್ಲಿ 10 ಕೋತಿಗಳ ಸಾವು

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಾಯನ ಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ಕೋತಿಗಳು ಅನುಮಾನಾಸ್ಪದ ರೀತಿ ಯಲ್ಲಿ ಸಾಯುತ್ತಿವೆ. ಸೋಮವಾರ ಆರು ಕೋತಿಗಳು ಮೃತಪಟ್ಟಿವೆ.

ಕಳೆದ ಮೂರು ದಿನಗಳಿಂದ 10ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಅನೇಕ ಕೋತಿಗಳ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಅಲ್ಲಲ್ಲಿ ಪತ್ತೆಯಾಗುತ್ತಿವೆ ಎಂದು ತಿಳಿದುಬಂದಿದೆ. ಗ್ರಾಮಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಪಶು ವೈದ್ಯರು ಅಸ್ವಸ್ಥಗೊಂಡಿರುವ ಕೋತಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೃತಪಟ್ಟ ಕೋತಿಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.

‘ಎಲ್ಲ ಕೋತಿಗಳು ಒಂದೇ ರೀತಿಯಲ್ಲಿ ಮೃತಪಟ್ಟಿವೆ. ಬಾಯಲ್ಲಿ ಜೊಲ್ಲು, ಭೇದಿಯಾಗಿರುವ ಲಕ್ಷಣ ಕಂಡು ಬಂದಿವೆ. ಇದನ್ನು ನೋಡಿದರೆ ಕೋತಿಗಳಿಗೆ ವಿಷ ಪ್ರಾಶನ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸತ್ತ ಕೋತಿಗಳ ಒಳಾಂಗಳ ಮಾದರಿಯನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಾಣಿ ಆರೋಗ್ಯ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಅಲ್ಲಿಂದ ವರದಿ ಬಂದ ನಂತರವಷ್ಟೇ ಕೋತಿಗಳ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಪಾಂಡುರಂಗಪ್ಪ ತಿಳಿಸಿದರು.

‘ಕೋತಿಗಳು ಏಕಾಏಕಿ ಸಾಯುತ್ತಿರು ವುದು ಗಾಬರಿ ಹುಟ್ಟಿಸಿದೆ. ಯಾರಾದರೂ ಕಾಟ ತಾಳದೆ ವಿಷ ಉಣ್ಣಿಸಿದ್ದಾರಾ ಅಥವಾ ವಿಷಪೂರಿತ ಪದಾರ್ಥಗಳನ್ನು ತಿಂದು ಸಾಯುತ್ತಿವೆಯಾ ತಿಳಿಯುತ್ತಿಲ್ಲ. ಅಸ್ವಸ್ಥಗೊಂಡ ಕೋತಿಗಳಿಗೆ ಆಹಾರ, ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ’ ಎಂದು ಗ್ರಾಮದ ನಿವಾಸಿ ಶಂಕರಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.