ಶುಕ್ರವಾರ, ಡಿಸೆಂಬರ್ 6, 2019
25 °C

ಮುಂದಿನ ಪೀಳಿಗೆ ಬಗ್ಗೆ ಕಾಳಜಿಬೇಕು

Published:
Updated:
ಮುಂದಿನ ಪೀಳಿಗೆ ಬಗ್ಗೆ ಕಾಳಜಿಬೇಕು

ವಿಜಯನಗರದ ಸುತ್ತಮುತ್ತ ಸಾಕಷ್ಟು ಅಭಿವೃದ್ಧಿ ಆಗಿದೆ. ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಉತ್ತಮಗೊಂಡಿದೆ. ಶಾಲಾ ಕಾಲೇಜುಗಳಿಗೆ ಬೇಕಾಗುವ ಮೈದಾನ ಅಭಿವೃದ್ಧಿ ಪಡಿಸಿರುವುದು ಇಲ್ಲಿಯ ಶಾಸಕರ ಹೆಗ್ಗಳಿಕೆ. ಆದರೆ, ಇಲ್ಲಿಯ ಸಮಸ್ಯೆ ಎಂದರೆ ಸರ್ಕಾರದಿಂದ ಸಿಗುತ್ತಿರುವ ಯಾವ ಸೌಕರ್ಯಗಳೂ ಜನರಿಗೆ ಸರಿಯಾಗಿ ಹಂಚಿಕೆ ಆಗುತ್ತಿಲ್ಲ. ಆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.

ಡಾಂಬರೀಕರಣ, ಸಿಮೆಂಟ್‌ ರಸ್ತೆಗಳ ಹೆಸರಿನಲ್ಲಿ ಮಳೆಯ ನೀರೆಲ್ಲಾ ಹರಿದು ಮೋರಿ ಸೇರುವಂತಾಗಿದೆ. ಬೋರ್‌ವೆಲ್‌ಗಳನ್ನು ಹಾಕಿ ನೀರು ತೆಗೆಯುವ ಕೆಲಸ ಮಾಡುವಷ್ಟೇ ಮುತುವರ್ಜಿ ಭೂಮಿಗೆ ನೀರಿಳಿಸುವ ನಿಟ್ಟಿನಲ್ಲಿ ಆಗುತ್ತಿಲ್ಲ.

ಹೀಗಾಗಿ ಇನ್ನು ಮುಂದಾದರೂ ಪ್ರತಿ ವಾರ್ಡ್‌ನಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಸರಿಯಾಗಬೇಕು. ಹೆಚ್ಚು ಹೆಚ್ಚು ಇಂಗುಗುಂಡಿಗಳನ್ನು ನಿರ್ಮಾಣ ಮಾಡಿ ನೀರು ಭೂಮಿಗೆ ಇಳಿಯುವಂತೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ದೊಡ್ಡ ಕೊಡುಗೆ ಕೊಡಬಲ್ಲೆವು. ಬೇರೆಲ್ಲಾ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗುತ್ತಿದೆ. ಆದರೆ ಅಂತರ್ಜಲ ರಕ್ಷಿಸುವ, ಹಸಿರು ಹೆಚ್ಚಿಸುವ ವಿಷಯದಲ್ಲಿ ಮಾತ್ರ ತುಂಬಾ ಹಿಂದೆ ಇದ್ದೇವೆ.

–ಮಹೇಶ್‌ ಭಟ್‌, ವಿಜಯನಗರ

ಪ್ರತಿಕ್ರಿಯಿಸಿ (+)