ಮಂಗಳವಾರ, ಜೂಲೈ 7, 2020
24 °C

ಕಠುವಾ ಅತ್ಯಾಚಾರ: ಪಡುಬಿದ್ರಿಯಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠುವಾ ಅತ್ಯಾಚಾರ: ಪಡುಬಿದ್ರಿಯಲ್ಲಿ ಪ್ರತಿಭಟನೆ

ಪಡುಬಿದ್ರಿ: ಜಮ್ಮುವಿನ ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಪಡುಬಿದ್ರಿಯಲ್ಲಿ ಮಂಗಳವಾರ  ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಗಮಿಸುವ ವೃತ್ತದ ಬಳಿ ಜಮಾಯಿಸಿದ ಸಾರ್ವಜನಿಕರು ಮೋಂಬತ್ತಿ  ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಬಿತ್ತಿ ಫಲಕ ಪ್ರದರ್ಶಿಸಿಸಿ ಘೋಷಣೆ ಕೂಗಿದರು. ಅರಫಾ ಬಾಯ್ಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದರು.

ದಲಿತ ಮುಖಂಡ ಲೋಕೇಸ್ ಕಂಚಿನಡ್ಕ ಮಾತನಾಡಿ, ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತಿವೆ.ಆದರೆ, ಪ್ರಧಾನಿ ಬೇಟಿ ಬಚಾವ್ ಎಂದು ಹೇಳಿಕೊಂಡು ಇನ್ನೊಂದೆಡೆ ನಡೆಯುವ ಅತ್ಯಾಚಾರ ಬಗ್ಗೆ ಮಾತನಾಡುತಿಲ್ಲ. ಅತ್ಯಾಚಾರಿಗಳು ಯಾರೇ ಆಗಲಿ ಅವರನ್ನು ಗಲ್ಲಿಗೇರಿಸುವಂತಹ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಹಸನ್ಬಾವಾ, ಎಸ್‌ಡಿಪಿಐನ ಹನೀಫ್ ಮೂಳೂರು, ಫಿರೋಝ್ ಕಂಚಿನಡ್ಕ, ಆಸೀಫ್ ಆಪದ್ಬಾಂಧವ, ರಿಝ್ವಾನ್ ಕಂಚಿನಡ್ಕ, ನಿಝಾಮ್, ಶಫೀಕ್, ಕಮ್ರಾನ್, ತೌಫೀಕ್, ಅಮೀರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.