ನಾಸಾ ಮುಖ್ಯಸ್ಥ ಸ್ಥಾನಕ್ಕೆ ಜಿಮ್

7

ನಾಸಾ ಮುಖ್ಯಸ್ಥ ಸ್ಥಾನಕ್ಕೆ ಜಿಮ್

Published:
Updated:
ನಾಸಾ ಮುಖ್ಯಸ್ಥ ಸ್ಥಾನಕ್ಕೆ ಜಿಮ್

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) 13ನೇ ಮುಖ್ಯಸ್ಥ ಸ್ಥಾನಕ್ಕೆ ಅಮೆರಿಕ ನೌಕಾಪಡೆಯ ಮುಖ್ಯಸ್ಥ, ಮಾಜಿ ಪೈಲಟ್‌ ಜಿಮ್‌ ಬ್ರಿಡೆನ್‌ಸ್ಟೈನ್‌ ಅವರನ್ನು ಅಮೆರಿಕ ಸಂಸತ್ತು ನೇಮಕ ಮಾಡಿದೆ.

ಜಿಮ್‌ (42) ಅವರ ಹೆಸರನ್ನು ಏಳು ತಿಂಗಳ ಹಿಂದೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ್ದರು. ಆದರೆ ಇವರು ತಂತ್ರಜ್ಞಾನದಲ್ಲಿ ಪಳಗಿಲ್ಲವೆಂದು ಅನೇಕರು ವಿರೋಧಿಸಿದ್ದರು. ಆದರೆ ಈಗ ಅಂಗೀಕಾರ ದೊರೆತಿದೆ.

ಮನುಷ್ಯರನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಬಗ್ಗೆ ಜಿಮ್‌ ಅತೀವ ಆಸಕ್ತಿ ಹೊಂದಿದ್ದಾರೆ. ನಾಸಾ ಮತ್ತು ಬಾಹ್ಯಾಕಾಶ ಉದ್ಯಮದ ಸಂಬಂಧವನ್ನು ಹತ್ತಿರ ತರುವ ಬಗ್ಗೆ ಅವರು ಮಾತನಾಡಿದ್ದಾರೆ.

2016ರ ಅಮೆರಿಕ ಅಧ್ಯಕ್ಷ ಚುನಾವಣೆ ವೇಳೆ ಜಿಮ್‌, ಟ್ರಂಪ್‌ ಬೆಂಬಲಕ್ಕೆ ನಿಂತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry