ಮೂಲಂಗಿ ಸೊಪ್ಪಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಕತ್ತರಿಸಿದ ಮೂಲಂಗಿ ಸೊಪ್ಪು – 2ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ – 5ರಿಂದ6, ಕಡಲೆಕಾಯಿಬೀಜದ ಪುಡಿ – 4ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ನಿಂಬೆರಸ – 2ಚಮಚ, ತೆಂಗಿನಕಾಯಿತುರಿ – 1/4ಕಪ್, ಎಣ್ಣೆ – 2ಚಮಚ, ಹೆಚ್ಚಿದ ಕೊತ್ತಂಬರಿ ಸೊಪ್ಪು – 3ಚಮಚ.

ತಯಾರಿಸುವ ವಿಧಾನ: ಕಾಯಿಸಿದ ಎಣ್ಣೆಯಲ್ಲಿ ಮೂಲಂಗಿ ಸೊಪ್ಪನ್ನು ಹಾಕಿ ಬಾಡಿಸಿ. ಬಾಡಿಸಿದ ಸೊಪ್ಪಿಗೆ, ಹಸಿಮೆಣಸಿನಕಾಯಿ, ಉಪ್ಪು, ಕಡಲೆಕಾಯಿಬೀಜದ ಪುಡಿ, ನಿಂಬೆರಸವನ್ನು ಹಾಕಿ ಚೆನ್ನಾಗಿ ಕಲಕಿ. ಸರ್ವಿಂಗ್ ಬೌಲ್ಗೆ ವರ್ಗಾಯಿಸಿ, ಕೊತ್ತಂಬರಿಸೊಪ್ಪು, ತೆಂಗಿನಕಾಯಿ ತುರಿಯಿಂದ ಅಲಂಕರಿಸಿದರೆ ಮೂಲಂಗಿ ಸೊಪ್ಪಿನ ಸಲಾಡ್ ರೆಡಿ.

ಬಾಳೆಹಣ್ಣಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಬಾಳೆಣ್ಣಿನ ತುಂಡು – 2ಕಪ್, ಕತ್ತರಿಸಿದ ಏಪ್ರಿಕಾಟ್(ಜರದಾಳು ಹಣ್ಣು) – 1ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ – 5ರಿಂದ6, ಚೆಕ್ಕೆ(ದಾಲ್ಚಿನ್ನಿ) ತುಂಡುಗಳು – 4ರಿಂದ5, ಕಡಲೆಕಾಯಿಬೀಜದ ಪುಡಿ – 3ಚಮಚ, ಕಾಳುಮೆಣಸಿನ ಪುಡಿ – 1/4ಚಮಚ, ತೆಂಗಿನಕಾಯಿ ತುರಿ – 1/4ಕಪ್, ಹೆಚ್ಚಿದ ಕೊತ್ತಂಬರಿ ಸೊಪ್ಪು – 3ಚಮಚ, ಉಪ್ಪು – ಚಿಟಿಕೆ

ತಯಾರಿಸುವ ವಿಧಾನ: ಬಾಳೆಹಣ್ಣಿನ ತುಂಡು ಹಾಗೂ ಏಪ್ರಿಕಾಟ್ ತುಂಡುಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಚಕ್ಕೆ, ಕಡಲೆಕಾಯಿ ಬೀಜದ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಸೇರಿಸಿ ಕಲೆಸಿ. ತೆಂಗಿನಕಾಯಿ ತುರಿ, ಕೊತ್ತಂಬರಿಸೊಪ್ಪುಗಳಿಂದ ಅಲಂಕರಿಸಿ, ಸರ್ವಿಂಗ್ ಬೌಲ್ಗೆ ವರ್ಗಾಯಿಸಿ.

ಮಾವಿನ ಹಣ್ಣಿನ ಸಲಾಡ್

ಬೇಕಾಗುವ ಸಾಮಗ್ರಿಗಳು: ಮಾವಿನಹಣ್ಣಿನ ತುಂಡುಗಳು – 3ಕಪ್, ಕತ್ತರಿಸಿದ ಕಪ್ಪುದ್ರಾಕ್ಷಿ – 1ಕಪ್, ಕ್ಯಾರೆಟ್ ತುರಿ – 1/2ಕಪ್, ಕಡಲೆಕಾಯಿ ಬೀಜದಪುಡಿ – 3ಚಮಚ, ನಿಂಬೆರಸ – 1ಚಮಚ, ಕತ್ತರಿಸಿದ ಪುದಿನಾ – 3ಚಮಚ, ಉಪ್ಪು– ಚಿಟಿಕೆ, ಲವಂಗದ ಪುಡಿ – 1/2 ಚಮಚ

ತಯಾರಿಸುವ ವಿಧಾನ: ಮಾವಿನ ಹಣ್ಣಿನ ತುಂಡುಗಳು, ಕಪ್ಪುದ್ರಾಕ್ಷಿ ಹಾಗೂ ಕ್ಯಾರೆಟ್ ತುರಿಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಉಪ್ಪು, ಕಡಲೆಕಾಯಿ ಬೀಜದ ಪುಡಿ, ನಿಂಬೆರಸ, ಪುದಿನಾಗಳನ್ನು ಸೇರಿಸಿ ಕಲಕಿ. ಸರ್ವ್ ಮಾಡುವಾಗ ಲವಂಗದ ಪುಡಿ ಉದುರಿಸಿ.

ಹಣ್ಣು-ತರಕಾರಿಗಳ ಮಿಶ್ರ ಸಲಾಡ್

ಬೇಕಾಗುವ ಸಾಮಗ್ರಿಗಳು: ಕರಬೂಜ ಹಣ್ಣಿನ ತುಂಡುಗಳು – 1ಕಪ್, ಮಾವಿನಹಣ್ಣಿನ ತುಂಡುಗಳು – 1/2ಕಪ್, ಸೇಬಿನ ತುಂಡುಗಳು – 1/2ಕಪ್, ಬಾಳೆಹಣ್ಣಿನ ಸ್ಲೈಸ್ಗಳು – 1/2ಕಪ್, ಕ್ಯಾರೆಟ್ ತುರಿ – 1/2ಕಪ್, ಕತ್ತರಿಸಿದ ದೊಣ್ಣೆಮೆಣಸಿನಕಾಯಿ – 1/4ಕಪ್, ಕತ್ತರಿಸಿದ ಸೌತೆಕಾಯಿಯ ತುಂಡುಗಳು – 1/4ಕಪ್, ಕತ್ತರಿಸಿದ ಟೊಮೆಟೊ – 1/4ಕಪ್, ಚಾಟ್ ಮಸಾಲೆ – 2ಚಮಚ, ಕಾಳುಮೆಣಸಿನ ಪುಡಿ – 1/2ಚಮಚ, ತುಪ್ಪ – 3ಚಮಚ, ಉಪ್ಪು – ಚಿಟಿಕೆ

ತಯಾರಿಸುವ ವಿಧಾನ: ತರಕಾರಿ ಹಾಗೂ ಹಣ್ಣುಗಳನ್ನು ಬೇರೆಬೇರೆಯಾಗಿ ತುಪ್ಪದಲ್ಲಿ ಹುರಿದು ಸೇರಿಸಿಡಿ. ಈ ಮಿಶ್ರಣಕ್ಕೆ, ಚಾಟ್ ಮಸಾಲೆ, ಉಪ್ಪು, ಕಾಳುಮೆಣಸಿನ ಪುಡಿ ಉದುರಿಸಿದರೆ, ಪೌಷ್ಟಿಕವಾದ ಹಣ್ಣು–ತರಕಾರಿಗಳ ಸಲಾಡ್ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.