ಸೋಮವಾರ, ಏಪ್ರಿಲ್ 19, 2021
31 °C

‘ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದ, ಕೊಲೆಗೆ ಬೆಂಬಲಿಸುವವರಿಗೆ ಪ್ರವೇಶವಿಲ್ಲ, ಮತ ಯಾಚನೆಗೆ ಬರಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದ, ಕೊಲೆಗೆ ಬೆಂಬಲಿಸುವವರಿಗೆ ಪ್ರವೇಶವಿಲ್ಲ, ಮತ ಯಾಚನೆಗೆ ಬರಬೇಡಿ’

ಮಂಗಳೂರು: ‘ಇದು 2016ರ ಮಾರ್ಚ್‌ 21ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರಿಗೆ ನ್ಯಾಯ ಕೇಳುವವರ ಮನೆ. ಇಲ್ಲಿ ಅವರನ್ನು ಕೊಲೆ ಮಾಡಿದ, ಕೊಲೆಗಾರರನ್ನು ಬೆಂಬಲಿಸುವವರಿಗೆ ಪ್ರವೇಶವಿಲ್ಲ. ಇಂತಹವರು ಯಾರೂ ಇಲ್ಲಿ ಮತ ಯಾಚನೆಗೆ ಬರಬೇಡಿ' ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಕೊಲೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಅವರ ಕುಟುಂಬ ಮನೆಯ ಎದುರು ಇಂತಹ ಬ್ಯಾನರ್ ಪ್ರಕಟಿಸಿದೆ.

ವಿನಾಯಕ ಬಾಳಿಗ ಕೊಲೆ ಮಾಡಿದವರಿಗೆ ಶಿಕ್ಷೆ ಕೊಡಿಸುವಂತೆ ಆಗ್ರಹಿಸುತ್ತಿರುವ ಹಲವರು ತಮ್ಮ ಮನೆಯ ಮುಂದೆ ಇಂತಹ ಬ್ಯಾನರ್ ಹಾಕಿದ್ದಾರೆ.

ವಿಚಾರವಾದಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.